ಮುಂಬೈನಲ್ಲಿ ಕನ್ನಡಿಗನ ತೊಳಲಾಟ

0101
Published on

ಕೊಕಟನೂರ: ಗ್ರಾಮದ ಕುಮಾರ ಗೋಪಾಲ ದಡ್ಡಿಮನಿ ಅವರು ಲಾಕ್‌ಡೌನ್‌ನಿಂದಾಗಿ ಮುಂಬೈ ನಗರದಲ್ಲಿ ಕುಟುಂಬಸ್ಥರೊಂದಿಗೆ ಕಷ್ಟ ಅನುಭವಿಸುತ್ತಿದ್ದು, ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಆಹಾರ, ಸೌಕರ್ಯಗಳಿಲ್ಲದೆ ಈ ಕುಟುಂಬ ಬಳಲುತ್ತಿದೆ. ದಡ್ಡಿಮನಿ 15 ವರ್ಷದಿಂದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಫನ್‌ವೆಲ್ ಸಿಡ್ಕೋ ಕಾಲನಿಯಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಮನೆಯಲ್ಲಿದ್ದ ರೇಷನ್ ಮುಗಿದಿದೆ. ಕೈಯಲ್ಲಿ ಕಾಸಿಲ್ಲ.

ತಾಯಿ ರುಕ್ಮಿಣಿ ಪಾರ್ಶ್ವವಾಯು ಪೀಡಿತಳಾಗಿದ್ದು, ಔಷಧ ತರಲೂ ಪೊಲೀಸರು ಬಿಡುತ್ತಿಲ್ಲ. ಇನ್ನೊಂದೆಡೆ ಕುಟುಂಬದವರ ಹಸಿವು ನೀಗಿಸಲು ಹೋರಾಡುತ್ತಿದ್ದಾರೆ. ಯಾರಾದರೂ ಸಹಾಯ ಮಾಡಿ ಎಂದು ವಿನಂತಿಸಿರುವ ವಿಡಿಯೋ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net