ಮುದಗಲ್‌ನಲ್ಲಿ ಸರಣಿ ಮನೆ ಕಳ್ಳತನ

mudgal burglesss
ಮುದಗಲ್‌ನಲ್ಲಿ ಸೋಮವಾರ ಮನೆಯ ತಿಜೋರಿ ಮುರಿದಿರುವುದು.
Published on

ಮುದಗಲ್: ಪಟ್ಟಣದ ಸೋಮವಾರ ಪೇಟೆಯ ಬಡಾವಣೆಯಲ್ಲಿ ಸೋಮವಾರ ಬೆಳಗಿನ ಜಾವ ಸರಣಿ ಮನೆ ಕಳ್ಳತನ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಸೋಮವಾರ ಪೇಟೆಯ ನಿವಾಸಿ ಕೃಷ್ಣಪ್ಪ ಬೊಮ್ಮನಾಳ ಎಂಬುವರ ಮನೆಯಲ್ಲಿ ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡ ಕಳ್ಳರು ಬೀಗ ಮುರಿದು ಚಿನ್ನ, ಬೆಳ್ಳಿ, ಹಣ ದೋಚಿದ್ದಾರೆ. ಮನೆ ಮುಂದಿನ ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದೆ. ಅಲ್ಲದೆ ನಂತರ ಅದೇ ಬಡಾವಣೆಯ ಎ.ಜಿ.ಗೌಡರ್, ನಾಗಪ್ಪ ಹೂಗಾರ್, ನಾಗರಾಜ ಭೋವಿ ಎಂಬುವರ ಮನೆ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ.

ಅದೇ ರಸ್ತೆ ಮಾರ್ಗದಲ್ಲಿ ಮುದಿಯಪ್ಪ ಗೋಧಿ ಎಂಬುವರ ಮನೆ ಮುಂದೆ ನಿಲಿಸಿದ್ದ ಬೈಕ್ ಕದ್ದೊಯ್ದಿದ್ದಾರೆ. ಇಷ್ಟಲ್ಲದೆ ಪಟ್ಟಣದ ಹೊರವಲಯ ಲಿಂಗಸಗೂರು ಮುಖ್ಯರಸ್ತೆಯಲ್ಲಿ ಮಹೇಶ ವಂದಾಲಿ ಎಂಬುವರ ಪಾನ್‌ಶಾಪ್‌ಗೂ ಕನ್ನ ಹಾಕಿದ್ದಾರೆ. ಆದರೆ, ಎಷ್ಟು ಮೊತ್ತದ ಚಿನ್ನ, ಬೆಳ್ಳಿ ಕಳವಾಗಿರುವ ಕುರಿತು ನಿಖರ ಮಾಹಿತಿ ಗೊತ್ತಾಗಿಲ್ಲ.

ಸಿಸಿ ಕ್ಯಾಮರಾದಲ್ಲಿ ಕಳ್ಳರ ಓಡಾಟ ಸೆರೆಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆ ಬಳಿಕ ಸೋಮವಾರ ಪೇಟೆ ಬಡಾವಣೆಗೆ ಎಎಸ್ಪಿ ಜಿ.ಹರೀಶ ಭೇಟಿ ನೀಡಿ ಕಳ್ಳತನವಾದ ಮನೆ ಮಾಲೀಕರೊಂದಿಗೆ ಚರ್ಚಿಸಿದರು. ಅಲ್ಲದೆ ಭಯಭೀತರಾಗದೆ ಧೈರ್ಯವಾಗಿರಿ ಎಂದು ಸಾರ್ವಜನಿಕರಿಗೆಆತ್ಮಸ್ಥೈರ್ಯ ತುಂಬಿದರು.

ಮಸ್ಕಿ ವೃತ್ತ ನಿರೀಕ್ಷಕ ಬಾಲಚಂದ್ರ ಲಕ್ಕಂ, ಮುದಗಲ್ ಠಾಣೆ ಪಿಎಸ್‌ಐ ವೆಂಕಟೇಶ ಮಾಡಗೇರಿ, ಕ್ರೈಂ ಪಿಎಸ್‌ಐ ಛತ್ರಪ್ಪ ರಾಠೋಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net