ಎಂಎಸ್‌ಡಬ್ಲುೃನಲ್ಲಿ ಜ್ಯೋತಿ ಕಾಂಬಳೆ ರ‌್ಯಾಂಕ್

19ckd4 Jyoti Rank Award Photo
Published on

ಚಿಕ್ಕೋಡಿ: ಜೊಲ್ಲೆ ಎಜುಕೇಷನ್ ಸೊಸೈಟಿಯ ಅಂಗ ಸಂಸ್ಥೆಯಾದ ಮೌಲಾನಾ ಅಬುಲ್ ಕಲಾಂ ಆಝಾದ ಬಿಎಸ್‌ಡಬ್ಲುೃ, ಎಂಎಸ್‌ಡಬ್ಲುೃ ಮಹಾವಿದ್ಯಾಲಯ ನಣದಿಯ ವಿದ್ಯಾರ್ಥಿನಿ ಜ್ಯೋತಿ ಕಾಂಬಳೆ ಎಂಎಸ್‌ಡಬ್ಲೂ ವಿಭಾಗದಲ್ಲಿ ಆರ್‌ಸಿಯುಗೆ ಪ್ರಥಮ ರ‌್ಯಾಂಕ್ ಪಡೆದಿದ್ದಾಳೆ.

ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ ಗೆಹಲೋತ್, ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಎಂ.ಸಿ. ಸುಧಾಕರ ಹಾಗೂ ಕುಲಪತಿ ಸಿ.ಎಂ.ತ್ಯಾಗರಾಜ ಅವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿನಿ ಜ್ಯೋತಿಗೆ ಈಚೆಗೆ ಪದವಿ ಪ್ರದಾನ ಮಾಡಲಾಯಿತು.

ವಿದ್ಯಾರ್ಥಿನಿಯ ಸಾಧನೆಗೆ ಜೊಲ್ಲೆ ಗ್ರೂಪ್‌ನ ಸಂಸ್ಥಾಪಕ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಹರ್ಷವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net