

ಅರಟಾಳ: ಗ್ರಾಮದ ಶ್ರೀ ಅವಜೀಕರ ಮಹಾರಾಜರ ಆಶ್ರಮದಲ್ಲಿ ಅವಜೀಕರ ಮಹಾರಾಜರ 26ನೇ ಪುಣ್ಯಸ್ಮರಣೆ ಸಪ್ತಾಹ ಜೂ. 17ಮತ್ತು 18ರಂದು ಜರುಗಲಿದೆ. ಜೂ.17ರಂದು ಬೆಳಗ್ಗೆ 10 ಗಂಟೆಗೆ ಶ್ರೀ ಸದ್ಗುರು ಗಿರೀಶಾನಂದ ಮಹಾರಾಜರಿಂದ ದಾಸಬೋಧ ಪೂಜೆಯೊಂದಿಗೆ ಸಪ್ತಾಹ ಪ್ರಾರಂಭಗೊಳ್ಳವುದು.
ಸಂಜೆ 6 ಗಂಟೆಗೆ ಪ್ರವಚನ, ರಾತ್ರಿ 8 ಗಂಟೆಗೆ ಬಾರಾಅಭಂಗ ಮತ್ತು ಜಾಗರಣೆ ನಡೆಯಲಿದೆ. ಜೂ.18ರಂದು ಬೆಳಗ್ಗೆ 5 ಗಂಟೆಗೆ ಕಾಕಡಾರತಿ, 9 ಗಂಟೆಗೆ ಪಲ್ಲಕ್ಕಿ ಉತ್ಸವ, 11 ಗಂಟೆಗೆ ವಿಮಲಬ್ರಹ್ಮ ನಿರೂಪಣೆ ಜರುಗಲಿದ್ದು, ಸೂರ್ಪಾಲಿಯ ಸದ್ಗುರು ಗಿರೀಶಾನಂದ ಮಹಾರಾಜರು ಅಧ್ಯಕ್ಷತೆ ವಹಿಸುವರು. ಕ್ಯಾರಗುಡ್ಡಮಠದ ಸದ್ಗುರು ಮಲ್ಲೇಶ್ವರ ಮಹಾರಾಜರು, ಚಿಕ್ಕ ಆಳಗುಂಡಿಯ ಶಿವಶರಣಾನಂದ ಮಹಾರಾಜರು ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಮರಾಠಿ ಆವೃತ್ತಿಯ ಸದ್ಗುರುವಾಣಿ ಗ್ರಂಥ ಬಿಡುಗಡೆ ಜರುಗುವುದು. ಬಳಿಕ ಪುಷ್ಪವೃಷ್ಟಿಯೊಂದಿಗೆ ಸಪ್ತಾಹ ಮಂಗಲಗೊಳ್ಳಲಿದೆ ಎಂದು ಕಮಿಟಿ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.