ಹೆರಂಜೆ ಕೃಷ್ಣ ಭಟ್ಟರು ಕರ್ಮಯೋಗಿಗಳು...

Heranje Lead
Published on

ಸುಗುಣೇಂದ್ರ ಶ್ರೀ ಆಶೀರ್ವಚನ

ಉಡುಪಿ ರಾಜಾಂಗಣದಲ್ಲಿ ನುಡಿನಮನ

ವಿಜಯವಾಣಿ ಸುದ್ದಿಜಾಲ ಉಡುಪಿ

ಸೋಲು-ಗೆಲುವು ಯಾವುದನ್ನೂ ಯೋಚಿಸಬೇಡ. ಮಾಡುವ ಕರ್ತವ್ಯದಲ್ಲಿ ಕೇಂದ್ರೀಕೃತವಾಗಿರು. ಅದರಿಂದ ಕರ್ಮಯೋಗಿಯಾಗಲು ಸಾಧ್ಯ ಎಂದು ಕುರುಕ್ಷೇತ್ರದಲ್ಲಿ ಹತಾಶನಾಗಿ ಕುಳಿತಿದ್ದ ಅರ್ಜುನನಿಗೆ ಶ್ರೀಕೃಷ್ಣನು ಉಪದೇಶ ಮಾಡಿದ್ದನು. ಅದರಂತೆಯೇ ಹೆರಂಜೆ ಕೃಷ್ಣ ಭಟ್ಟ ಅವರೂ ಸಹ ನಿಶ್ಯಬ್ದವಾಗಿ ತಮ್ಮ ಕಾರ್ಯದಲ್ಲಿ ತೊಡಗುತ್ತಿದ್ದರು. ಕೃಷ್ಣನ ಮಾತಿನಂತೆ ನಿಜಕ್ಕೂ ಅವರೊಬ್ಬ ಕರ್ಮಯೋಗಿ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

ಇತ್ತೀಚೆಗೆ ನಿಧನರಾದ ನಿವೃತ್ತ ಸಂಸ್ಕೃತ ಉಪನ್ಯಾಸಕ, ಶ್ರೇಷ್ಠ ಸಂಘಟಕರೂ ಆಗಿದ್ದ ಪ್ರೊ. ಹೆರಂಜೆ ಕೃಷ್ಣ ಭಟ್​ ಅವರ ಸ್ಮರಣಾರ್ಥ ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಮೇ 14ರಂದು ಸಂಜೆ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ನಮಗೂ ವೈಯಕ್ತಿಕವಾಗಿ ನಷ್ಟ

ಅತ್ಯಂತ ಜವಾಬ್ದಾರಿಯಿಂದ ಅವರು ಎಲ್ಲ ಕೆಲಸವನ್ನೂ ನಿಭಾಯಿಸುತ್ತಿದ್ದರು. ಎಲ್ಲರೂ ಅವರನ್ನು ಮಿತಭಾಷಿ ಎನ್ನುತ್ತಾರೆ. ಆದರೆ, ನಮ್ಮೊಂದಿಗೆ ಗಂಟೆಗಳ ಕಾಲ ವಿವಿಧ ವಿಚಾರ-ವಿಷಯಗಳಿಗೆ ಮನಸ್ಸು ಬಿಚ್ಚಿ ಮಾತನಾಡುತ್ತಿದ್ದರು. ಅವರನ್ನು ನಿಷ್ಠುರಕ್ಕೆ ಕೃಷ್ಣ ಭಟ್ಟರು ಎಂದು ನಾವು ಕರೆಯುತ್ತಿದ್ದೆವು. ಅವರೂ ಈ ಮಾತಿನಿಂದ ಸಂತಸಗೊಳ್ಳುತ್ತಿದ್ದರು. ಸಂಘಟನಾ ಕಾರ್ಯಕ್ಕೆ ಮಾದರಿಯಾಗಿದ್ದ ಅವರ ಅಗಲಿಕೆ ನಮಗೂ, ಪುತ್ತಿಗೆ ಮಠಕ್ಕೂ ವೈಯಕ್ತಿಕವಾಗಿ ಭಾರಿ ನಷ್ಟವಾಗಿದೆ ಎಂದು ಸುಗುಣೇಂದ್ರ ಶ್ರೀಗಳು ಹೇಳಿದರು.

Heranje 2
ಪರ್ಯಾಯ ಪುತ್ತಿಗೆಯ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು, ಹೆರಂಜೆ ಭಟ್​ ಅವರ ಕುರಿತು ತಮ್ಮ ಅನುಭವ ಹಂಚಿಕೊಡರು.
Heranje 3
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೊ. ಎಂ.ಎಲ್​. ಸಾಮಗ, ಡಾ. ಪಾದೆಕಲ್ಲು ವಿಷ್ಣು ಭಟ್​, ಡಾ. ಎಂ.ಪ್ರಭಾಕರ ಜೋಶಿ, ಡಾ. ಕೆ.ಪಿ. ರಾವ್​, ರಾಘವ ನಂಬಿಯಾರ್​, ಡಾ. ಭಾಸ್ಕರಾನಂದ ಕುಮಾರ, ಪ್ರದೀಪ ಕಲ್ಕೂರ, ಡಾ. ಹರಿರಾಮ ಆಚಾರ್ಯ, ಡಾ. ಎನ್​.ಟಿ. ಭಟ್​ ಇತರರು ನುಡಿನಮನ ಸಲ್ಲಿಸಿದರು.
Heranje 4
ಶ್ರೀಮಠದ ದಿವಾನ ನಾಗರಾಜ ಆಚಾರ್ಯ, ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ ತಂತ್ರಿ, ಮಹಿತೋಷ ಆಚಾರ್ಯ, ರಮೇಶ ಭಟ್​, ಡಾ. ಬಿ.ಗೋಪಾಲ ಆಚಾರ್ಯ ಹಾಗೂ ಹೆರಂಜೆ ಕೃಷ್ಣ ಭಟ್​ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.

ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್​ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net