ಬಾಬು ಜಗಜೀವನ್ ರಾಮ್ ಸ್ಮರಣೆ

In memory of Babu Jagjivan Ram
Published on

ಮಡಿಕೇರಿ:

ಸ್ವಾತಂತ್ರö್ಯ ಭಾರತದಲ್ಲಿ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಪ್ರಮುಖರಲ್ಲಿ ಡಾ. ಬಾಬು ಜಗಜೀವನ್ ರಾಮ್ ಕೂಡ ಒಬ್ಬರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಅಭಿಪ್ರಾಯಪಟ್ಟರು. ಇಲ್ಲಿನ ಗಾಂಧಿಭವನದಲ್ಲಿ ಶನಿವಾರ ಏರ್ಪಡಿಸಿದ್ದ ಬಾಭು ಜಗಜೀವನ್‌ರಾಮ್ ಅವರ 38ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಉಪ ಪ್ರಧಾನಿ, ರಕ್ಷಣಾ ಸಚಿವ, ರೈಲ್ವೇ ಸಚಿವ, ಕೃಷಿ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದವರು ಬಾಬೂಜಿ. ಇವರು ಹಸಿರು ಕ್ರಾಂತಿಯ ಪ್ರಮುಖರು ಕೂಡ ಹೌದು. ರಾಷ್ಟçಕ್ಕೆ ಮಾರ್ಗದರ್ಶನ ನೀಡಿದ ಬಾಬು ಜಗಜೀವನ್ ರಾಮ್ ಅವರಂತಹ ಆದರ್ಶ ಈಗಿನ ತಲೆಮಾರಿಗೆ ಮಾದರಿಯಾಗುವಂಥದ್ದು ಎಂದರು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಬಾಬು ಜಗಜೀವನ್ ರಾಮ್ ಅವರ ಮಾದರಿ ನಡೆ ಎಲ್ಲರಿಗೂ ಅನುಕರಣೀಯ. ಪ್ರತಿ ದಿನವೂ ಅವರನ್ನು ನೆನೆಯುವಂತಾಗಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಸಿಇಒ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ. ಹೆಚ್ಚುವರಿ ಎಸ್.ಪಿ. ಸುಂದರ್ ರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net