

ಬೈಲಹೊಂಗಲ: ಪಟ್ಟಣದ ನಿವಾಸಿ, ಮೂಲತ@ ಇಂಚಲ ಗ್ರಾಮದ ಡಾ.ಇರಮತಹೂರ್ ಮಿರ್ಜನ್ನವರ್ ಎಂಬಿಬಿಎಸ್ ಪದವಿಯಲ್ಲಿ ರಾಜ್ಯಕ್ಕೆ 8ನೇ ರ್ಯಾಂಕ್ನೊಂದಿಗೆ ಎರಡು ಬಂಗಾರದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಪಟ್ಟಣದ ಕೆ.ಆರ್.ಸಿ.ಇ.ಎಸ್, ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಣ ಹಾಗೂ ಕಲ್ಪವ ಮಾಡೆಲ್ ಶಾಲಯಲ್ಲಿ ಮಾಧ್ಯಮಿಕ ಶಿಣ ಪೂರೈಸಿ, ಮಂಗಳೂರಿನ ಎಕ್ಸಪರ್ಟ್ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ ಬಾಗಲಕೋಟೆ ಎಸ್. ನಿಜಲಿಂಗಪ್ಪ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್ ಪದವಿಗೆ ಪ್ರವೇಶ ಪಡೆದ ಇವರು 2024&25ನೇ ಸಾಲಿನ ಎಂ.ಬಿ.ಬಿ.ಎಸ್ ಪರೀೆಯಲ್ಲಿ ಸಮುದಾಯ ಆರೋಗ್ಯ (ಇಟಞಞ್ಠ್ಞಜಿಠಿಢ ಋಛಿಛಜ್ಚಿಜ್ಞಿಛಿ) ವಿಭಾಗದಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ 8ನೇ ರ್ಯಾಂಕ್ ಮತ್ತು ಶೈಣಿಕ ವರ್ಷದ ನಾಲ್ಕು ವರ್ಷಗಳ ಸರಾಸರಿಯಲ್ಲಿ ಟಾಪರ್ ಆದ ಹಿನ್ನಲೆಯಲ್ಲಿ ಮಹಾವಿದ್ಯಾಲಯ 16ನೇ ಟಿಕೋತ್ಸವದಲ್ಲಿ ಕುಲಪತಿ ಡಾ.ಭಗವಾನ ಬಿ.ಸಿ. ಅವರಿಂದ ಪದವಿ ಪ್ರಮಾಣ ಪತ್ರ, ಎರಡು ಬಂಗಾರ ಪದಕ ಪಡೆದಿದ್ದಾರೆ. ಬೆಳಗಾವಿ ಅಲ್ಪಸಂಖ್ಯಾತ ಅಭಿವದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕ ಡಾ. ಅಬ್ದುಲ್ ರಶೀದ ಮಿರ್ಜನ್ನವರ್, ಬೆಳಗಾವಿ ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಎಸ್.ಎಸ್. ಬಳ್ಳಾರಿ ವಿದ್ಯಾರ್ಥಿನಿ ತಂದೆ&ತಾಯಿಯಾಗಿದ್ದಾರೆ.