ಮಸ್ಕಿಯಲ್ಲಿ ಮಹಿಳೆಯರಿಂದ ಕುಂಭೋತ್ಸವ

Maski kumba mela
ಮಸ್ಕಿಯಲ್ಲಿ ಶ್ರೀ ಭ್ರಮರಾಂಬ ದೇವಿ ಜಾತ್ರೆ ಅಂಗವಾಗಿ ಮಹಿಳೆಯರಿಂದ ಕುಂಭ ಮೆರವಣಿಗೆ ಜರುಗಿತು.
Published on

ಮಸ್ಕಿ: ಪಟ್ಟಣದ ಶ್ರೀ ಭ್ರಮರಾಂಬ ದೇವಿ ಜಾತ್ರೋತ್ಸವ ನಿಮಿತ್ತ ಮಂಗಳವಾರ ಮುತ್ತೈದೆಯರಿಂದ ಕುಂಭಾಭಿಷೇಕ, ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚಾನೆಯೊಂದಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಶೋಕ ವೃತ್ತದದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಲಾಯಿತು. ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಪುಷ್ಪ ಅರ್ಪಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಗಂಗೆಸ್ಥಳದಲ್ಲಿ ದೇವಿ ಮೂರ್ತಿ ಹಾಗೂ ಕುಂಭಗಳಿಗೆ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯು ವೀರಭದ್ರೇಶ್ವರ ದೇವಸ್ಥಾನ, ದೈವದಕಟ್ಟೆ, ಮಲ್ಲಿಕಾರ್ಜುನ ದೇವಸ್ಥಾನ, ಕನಕ ವೃತ್ತದ ಮೂಲಕ ಮರಳಿ ಭ್ರಮರಾಂಬ ದೇವಸ್ಥಾನ ತಲುಪಿತು. ಗೊರವರ ಕುಣಿತ, ನಂದಿಕೋಲು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನ ಗಮನ ಸೆಳೆಯಿತು.

ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಮಹಾದೇವಪ್ಪಗೌಡ ಪೊಲೀಸ ಪಾಟೀಲ್, ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಪ್ರಕಾಶ ಧಾರಿವಾಲ, ಅಂದಾನಪ್ಪ ಗುಂಡಳ್ಳಿ, ಶ್ರೀಶೈಲಪ್ಪ ಬ್ಯಾಳಿ, ಬಸನಗೌಡ ಪೊಲೀಸ್ ಪಾಟೀಲ್, ರವಿಗೌಡ ಪಾಟೀಲ್, ಮಲ್ಲಯ್ಯ ಅಂಬಾಡಿ, ಎಂ.ಪ್ರಭುದೇವ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ತಾಪಂ ಇಒ ಅಮರೇಶ ಯಾದವ್, ಪುರಸಭೆ ಮುಖ್ಯಾಧಿಕಾರಿ ನರಸರಡ್ಡಿ ಇತರರಿದ್ದರು.

ಗ್ರಾಮದ ಜಂಗಮರಿಗೆ ಗಣಾರಾಧನೆ ಮತ್ತು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಿಪಿಐ ಬಾಲಚಂದ್ರ ಡಿ.ಲಕ್ಕಂ ಹಾಗೂ ಪಿಎಸ್‌ಐ ರಂಗಯ್ಯ ಬಂದೋಬಸ್ತ್ ಏರ್ಪಡಿಸಿದ್ದರು. ಪುರಸಭೆಯಿಂದ ಸ್ವಚ್ಛತೆ ಹಾಗೂ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ವಿದ್ಯುತ್ ಅವಘಡ ಸಂಭವಿಸದಂತೆ ಜೆಸ್ಕಾಂ ಮುಂಜಾಗ್ರತೆ ವಹಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net