ಮಾನ್ವಿಯಲ್ಲಿ ಶಿಕ್ಷಕರ ದಿನಾಚರಣೆ ಸೆ.27 ರಂದು

manvi tippanna bagalvada
ತಿಪ್ಪಣ್ಣ ಬಾಗಲವಾಡ
Published on

ಮಾನ್ವಿ: ತಾಲೂಕು ಖಾಸಗಿ ಕಾಲೇಜುಗಳ ಅಡಳಿತ ಮಂಡಳಿಗಳ ಒಕ್ಕೂಟ ಹಾಗೂ ಉಪನ್ಯಾಸಕರ ಸಂಘದಿಂದ ಪಟ್ಟಣದಲ್ಲಿ ಸೆ.27 ರಂದು ಶಿಕ್ಷಕರ ದಿನಾಚಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಪಿ.ತಿಪ್ಪಣ್ಣ ಬಾಗಲವಾಡ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದು, ಸಿಂಧನೂರಿನ ಚಂದ್ರಕಲಾ ಪ್ರಕಾಶ ಉಪನ್ಯಾಸ ನೀಡುವರು.

ಶಾಸಕ ಹಂಪಯ್ಯ ನಾಯಕ ಸೇರಿದಂತೆ ವಿವಿಧ ಮಠಗಳ ಶ್ರೀಗಳು ಹಾಗೂ ಮಾಜಿ ಶಾಸಕರು , ಮುಖಂಡರು, ಗಣ್ಯರು ಮತ್ತು ವಿವಿಧ ಕಾಲೇಜುಗಳ ಆಡಳಿತ ಮಂಡಳಿಯವರು ಹಾಗೂ ಉಪನ್ಯಾಸಕರು ಭಾಗವಹಿಸಲಿದ್ದಾರೆ. ಮಾನ್ವಿ ಮತ್ತು ಸಿರವಾರ ತಾಲೂಕುಗಳ ವಿವಿಧ ಕಾಲೇಜುಗಳ ಆಯ್ದ ಉಪನ್ಯಾಸಕರಿಗೆ ಉತ್ತಮ ಉಪನ್ಯಾಸಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಒಕ್ಕೂಟದ ಪ್ರಮುಖರಾದ ಕೆ.ಈ. ನರಸಿಂಹ, ಮೌನೇಶಗೌಡ ಹರೆಟನೂರು, ಖಾಸಗಿ ಕಾಲೇಜ್ ಉಪನ್ಯಾಸಕರ ಸಂಘದ ತಾಲೂಕು ಅಧ್ಯಕ್ಷ ಆಂಜನೇಯ, ಈರಣ್ಣ ಮರ್ಲಟ್ಟಿ, ಶರಣಬಸವ ಸೀಕಲ್, ಮಹಾಂತೇಶ್ ಓಲೇಕಾರ, ವೀರಭದ್ರಯ್ಯಸ್ವಾಮಿ, ಮೆಹಬೂಬ್ ಮದ್ಲಾಪುರ್, ಕೃಷ್ಣಾವಧೂತ, ಹನುಮಂತ ಯಡಿವಾಳ, ಹನುಮಂತರಾಯ ಗಲಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net