ಮಣಿಪುರದಲ್ಲಿ ಅತ್ಯಾಚಾರವೆಸಗಿದ ಅಪರಾಧಿಗಳನ್ನು ಬಂಧಿಸಿ

manavi
ಸಿರಗುಪ್ಪ ತಾಲೂಕಿನ ದಲಿತ ಒಕ್ಕೂಟಗಳ ಪದಾಧಿಕಾರಿಗಳು ತಹಸೀಲ್ದಾರ್ ಎನ್.ಆರ್. ಮಂಜುನಾಥಸ್ವಾಮಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಒಕ್ಕೂಟಗಳ ಮುಖಂಡ ಎಚ್.ಬಿ.ಗಂಗಪ್ಪ, ಪದಾಧಿಕಾರಿಗಳಾದ ಎಂ.ದೊಡ್ಡಬಸಪ್ಪ, ಕೊಡ್ಲೆ ಮಲ್ಲಿಕಾರ್ಜುನ, ಎಚ್.ಭೀಮೇಶ, ಎಸ್.ವೀರೇಶ, ಎಸ್.ರಫಿ, ಎಚ್.ವೀರೇಶ, ಬಿ.ಹನುಮೇಶ, ನಾಗಪ್ಪ, ದುರುಗಪ್ಪ, ಸುರೇಶ್, ಮುನಿಸ್ವಾಮಿ, ಲಕ್ಷ್ಮಣ ಬಂಢಾರಿ ಇದ್ದರು.
Published on

ಸಿರಗುಪ್ಪ: ಮಣಿಪುರದಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರವೆಸಗಿ, ಬೆತ್ತಲೆ ಮೆರವಣಿಗೆ ಮಾಡಿರುವ ಅಪರಾಧಿಗಳನ್ನು ಕೂಡಲೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ದಲಿತ ಒಕ್ಕೂಟಗಳ ಪದಾಧಿಕಾರಿಗಳು ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿಗೆ ಶುಕ್ರವಾರ ಮನವಿ ಸಲ್ಲಿಸಿದರು.


ದಲಿತ ಒಕ್ಕೂಟಗಳ ಅಧ್ಯಕ್ಷ ಎಚ್.ಬಿ.ಗಂಗಪ್ಪ ಮಾತನಾಡಿ, ಮಣಿಪುರದಲ್ಲಿ ನಡೆದ ಘಟನೆಯು ಅತ್ಯಂತ ಹೇಯಕೃತ್ಯವಾಗಿದ್ದು, ಸ್ವಾತಂತ್ರೃ ದೊರೆತು 75 ವರ್ಷವಾದರೂ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆ, ಶೋಷಣೆ ನಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ಪತಿ ಭಾರತೀಯ ಸೇನೆಯ ಯೋಧನಾಗಿದ್ದು, ಕಾರ್ಗಿಲ್ ಯುದ್ದದಲ್ಲಿ ಭಾಗಿಯಾಗಿದ್ದಾರೆ. ದೇಶವನ್ನು ರಕ್ಷಿಸಿದ್ದೇನೆ,ಆದರೆ ನನ್ನ ಹೆಂಡತಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂಬ ಮಾತನ್ನು ಸಾರ್ವಜನಿಕರ ಮುಂದೆ ಸೈನಿಕ ವ್ಯಕ್ತಪಡಿಸಿದ್ದಾನೆ. ಅಲ್ಲಿನ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು. ಈ ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿಬೇಕೆಂದು ಒತ್ತಾಯಿಸಿದರು.


ಒಕ್ಕೂಟದ ಪದಾಧಿಕಾರಿಗಳಾದ ಎಂ.ದೊಡ್ಡಬಸಪ್ಪ, ಕೊಡ್ಲೆ ಮಲ್ಲಿಕಾರ್ಜುನ, ಎಚ್.ಭೀಮೇಶ, ಎಸ್.ವೀರೇಶ, ಎಸ್.ರಫಿ, ಎಚ್.ವೀರೇಶ, ಬಿ.ಹನುಮೇಶ, ನಾಗಪ್ಪ, ದುರುಗಪ್ಪ, ಸುರೇಶ್, ಮುನಿಸ್ವಾಮಿ, ಲಕ್ಷ್ಮಣ ಬಂಢಾರಿ, ಶರಣರಾಜ್, ಪಕ್ಕೀರಪ್ಪ, ನಾಗೇಶ್ವರರಾವ್, ಶೇಕಣ್ಣ, ವೀರೇಶ ದಳವಾಯಿ, ಹನುಮಂತ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net