ಕೂಡ್ಲಿಗಿಯಲ್ಲಿ ಸರಳಿ ಕಳ್ಳತನ

15 KUDLI 01
ಕೂಡ್ಲಿಗಿಯ ಚೋರುನೂರು ರಸ್ತೆಯ ಕಾಲನಿಯಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆ ಪ್ರಥಮ ದರ್ಜೆ ಸಹಾಯಕ ಹೈದರ್ ಅವರ ಮನೆಯ ಬೀರು ಮುರಿದು ಆಭರಣ, ಹಣ ಕಳವು ಮಾಡಲಾಗಿದೆ.
Published on

ಕೂಡ್ಲಿಗಿ: ಕಳೆದ 4 ದಿನಗಳಲ್ಲಿ ಪಟ್ಟಣದ ಹೊರವಲಯದ ಚೋರನೂರು ರಸ್ತೆಯ ಎರಡು ಮನೆಗಳಲ್ಲಿ ಸರಣಿ ಕಳ್ಳತನ ಮಾಡಲಾಗಿದೆ.

ಲೋಕೋಪಯೋಗಿ ಇಲಾಖೆ ಪ್ರಥಮ ದರ್ಜೆ ಸಹಾಯಕ ಹೈದರ್ ಅವರ ಮನೆ ಬೀಗ ಮುರಿದು, ಬೀರುನಲ್ಲಿದ್ದ 4 ತೊಲ ಬಂಗಾರ, 50 ಸಾವಿರ ನಗದು, 250 ಗ್ರಾಮ್ ಬೆಳ್ಳಿ, ಕಂಪ್ಯೂಟರ್ ಕಳವು ಮಾಡಲಾಗಿದೆ. ಬೆಂಗಳೂರಿನಿಂದ ಹೈದರ್ ಭಾನುವಾರ ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಕೂಡಲೇ ಕೂಡ್ಲಿಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಲೋಕೋಪಯೋಗಿ ಇಲಾಖೆ ನಿವೃತ್ತ ನೌಕರ ಸೋಮಶೇಖರ್ ಬೀಗ ಹಾಕಿ ಹೊರಗಡೆ ಹೋಗಿದ್ದನ್ನು ಗಮನಿಸಿದ ಖದೀಮರು ಮಂಗಳವಾರ ಹಾಡಹಗಲೇ ಮನೆಗೆ ಬೀಗ ಮುರಿದು 4 ತೊಲ ಬಂಗಾರ, 1ಕೆಜಿ ಬೆಳ್ಳಿ, 10 ಸಾವಿರ ರೂ.ಕಳ್ಳತನ ಮಾಡಿದ್ದಾರೆ.

ದಿನೇ ದಿನೆ ಕಳ್ಳತನ ವಾಗುತ್ತಿರುವುದರಿಂದ ಜನ ಭಯಭೀತರಾಗಿದ್ದಾರೆ. ಪೋಲಿಸರು ಈ ಬಗ್ಗೆ ಜಾಗೃತಿ ವಹಿಸಿ ರಾತ್ರಿ ಪಾಳೆಯಲ್ಲಿ ಪಟ್ಟಣದ ಹೊರ ವಲಯದ ಕಾಲನಿಗಳಲ್ಲಿ ಗಸ್ತು ಬರಬೇಕು. ಹಾಡ ಹಗಲೇ ನಡೆದ ಕಳ್ಳತನವನ್ನು ಪತ್ತೆಹಚ್ಚಬೇಕು.

ಅನಾಮಧೇಯ ವ್ಯಕ್ತಿಗಳು ಸಂಚರಿಸಿದರೆ ಅವರ ಬಗ್ಗೆ ತೀವ್ರ ನಿಗಾವಹಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. ಸರಣಿ ಕಳ್ಳತನದ ಜಾಡು ಪತ್ತೆ ಹಚ್ಚಲು ಸಿಪಿಐ ವಿನಾಯಕ ಹಾಗೂ ಪೋಲಿಸರು ಶ್ವಾನ ಮತ್ತು ಬೆರಳಚ್ಚುಗಾರರ ತಂಡ ಬಂದು ಪರಿಶೀಲನೆ ನಡೆಸಿದ್ದಾರೆ.

15ಕೂಡ್ಲಿಗಿ1:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net