

ಗೋಕಾಕ: ಕರ್ನಾಟಕದಲ್ಲಿ ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕು. ಕನ್ನಡ ಭಾಷೆ ನಮಗೆ ಮುಖ್ಯ. ನಂತರ ಇತರೆ ಭಾಷೆಗಳಿಗೆ ಒತ್ತು ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ಹಿಂದಿ ಹೇರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರದ ಹಿಲ್‌ಗಾರ್ಡನ್‌ನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಈ ಹಿಂದೆ ದೇಶ್ಯಾದ್ಯಂತ ಹಿಂದಿ ಹೇರಿಕೆಗೆ ಒತ್ತಡ ನಡೆದಿತ್ತು. ಹಲವು ರಾಜ್ಯಗಳು ಇದನ್ನು ಖಂಡಿಸಿದ್ದವು.
ಮೊದಲು ಪ್ರಾದೇಶಿಕ ಭಾಷೆಗೆ ಒತ್ತು ನೀಡಬೇಕು ಎಂದರು. ಇಲ್ಲಿಯವರೆಗೂ ಕನ್ನಡ ಭಾಷೆಯಲ್ಲಿ ಆಡಳಿತ ನಡೆಸಿದ್ದೇವೆ. ಕನ್ನಡಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಆ ನಂತರ ಆಸ್ತಕರು ತಮಗಿಷ್ಟದ ಭಾಷೆ ಕಲಿಯುತ್ತಾರೆ ಎಂದರು. ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ಸೌಲಭ್ಯ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಬೇಕು.
ಕೆಲ ಸಿಬ್ಬಂದಿಗೆ ಇನ್ನೂ ಸಂಬಳ ಸಿಕ್ಕಿಲ್ಲ. ಈ ಸಮಸ್ಯೆಗಳನ್ನು ಸರ್ಕಾರ ಶೀಘ್ರ ಬಗೆಹರಿಸಬೇಕು ಎಂದು ಶಾಸಕ ಸತೀಶ ಸರ್ಕಾರನ್ನು ಒತ್ತಾಯಿಸಿದರು.