ಕನ್ನಡದಲ್ಲಿ ನಾಮಫಲಕ ಬರೆಸಲು ಸೂಚಿಸಿ

Untitled design
ಲಿಂಗಸುಗೂರು ಎಸಿ ಅವಿನಾಶ ಶಿಂಧೆಗೆ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಶಿವರಾಜ ನಾಯ್ಕ, ಪ್ರಧಾನ ಕಾರ್ಯದರ್ಶಿ ನಿರುಪಾದಿ ಹಿರೇಮಠ, ಪ್ರಮುಖರಾದ ಚಂದ್ರು ನಾಯಕ, ಚಂದ್ರಕಾಂತ ಭೋವಿ, ಶಿವರಾಜ ಅಲಬನೂರು, ಶಿವರಾಜ ಪತ್ತಾರ, ವಿವೇಕಾನಂದ ನಾಯಕ, ಮಹಾಂತಯ್ಯ ವಿರಕ್ತಮಠ, ದ್ಯಾಮನಗೌಡ, ವೆಂಕಟೇಶ ಗುತ್ತೇದಾರ, ರುದ್ರಯ್ಯಸ್ವಾಮಿ, ಶಂಕರ ಇದ್ದರು.
Published on

ಲಿಂಗಸುಗೂರು: ತಾಲೂಕಿನಲ್ಲಿ ವಿವಿಧ ವಾಣಿಜ್ಯ ಚಟುವಟಿಕೆ ನಡೆಸುವ ಮಳಿಗೆಗಳ ಮೇಲೆ ಕನ್ನಡದಲ್ಲಿ ನಾಮಫಲಕ ಅಳವಡಿಸಲು ಆದೇಶ ಹೊರಡಿಸಬೇಕೆಂದು ಒತ್ತಾಯಿಸಿ ಎಸಿ ಅವಿನಾಶ ಶಿಂಧೆಗೆ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಶುಕ್ರವಾರ ಮನವಿ ಸಲ್ಲಿಸಿದರು.


ವ್ಯಾಪಾರ-ವಾಣಿಜ್ಯ ಸಂಸ್ಥೆಗಳ ನಾಮಫಲಕದಲ್ಲಿ ಶೇ. 70 ಕನ್ನಡ, ಶೇ.30 ಇತರ ಭಾಷೆಯಲ್ಲಿರಬೇಕೆಂದು ಸರ್ಕಾರದ ಆದೇಶವಿದೆ. ಆದರೆ, ವ್ಯಾಪಾರಿ ಸಂಸ್ಥೆಗಳ ಮಾಲಿಕರು ಸರ್ಕಾರದ ಆದೇಶ ನಿರ್ಲಕ್ಷಿಸಿ, ಅನ್ಯ ಭಾಷೆ ನಾಮಫಲಕ ಅಳವಡಿಸಿದ್ದಾರೆ. ನ.1ರೊಳಗೆ ಕನ್ನಡದಲ್ಲಿ ನಾಮಫಲಕ ಅಳವಡಿಸುವಂತೆ ಎಲ್ಲ ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ನೋಟಿಸ್ ಹೊರಡಿಸಬೇಕು. ಕನ್ನಡ ರಾಜ್ಯೋತ್ಸವ ದಿನದಂದು ಚಿತ್ರ ಮಂದಿರಗಳಲ್ಲಿ ಕನ್ನಡ ಚಲನಚಿತ್ರ ಪ್ರದರ್ಶಿಸಲು ಸೂಚಿಸಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net