ಕಂಪ್ಲಿಯಲ್ಲಿ ಬೀಡುಬಿಟ್ಟ ಒಂಟೆಗಳು

Kampli Camels
ಕಂಪ್ಲಿಯ ಮಡ್ಡಿಕಟ್ಟೆ ಬಳಿ ಭಾನುವಾರ ಮಾಲೀಕರನ್ನು ಹೊತ್ತು ಸಾಗಿದ ಒಂಟೆಗಳು.
Published on

ಕಂಪ್ಲಿ: ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ಮೂರು ಒಂಟೆಗಳು ಬೀಡು ಬಿಟ್ಟಿವೆ. ಮಕ್ಕಳು ಅವುಗಳ ಮೇಲೆ ಕುಳಿತು ಸಂಚರಿಸಿ ಸಂತೋಷಪಡುತ್ತಿದ್ದಾರೆ.

ಒಂಟೆ ಮಾಲೀಕ ಕರತ್ ಮಾತನಾಡಿ, ಮೂರು ತಲಾಮಾರುಗಳಿಂದ ಒಂಟೆ ಸಾಕುತ್ತ ಬಂದಿದ್ದು, ಮಹಾರಾಷ್ಟ್ರದ ಸೊಲ್ಲಾಪುರ ಬಳಿ ಜೈಭೀಮ್ ನಗರದಿಂದ ಹೊಟ್ಟೆಪಾಡಿಗಾಗಿ ಊರೂರು ಅಲೆಯುತ್ತ ಇಲ್ಲಿಗೆ ಬಂದಿದ್ದೇವೆ. ಮದುವೆ, ಜಾತ್ರೆ, ಹಬ್ಬಗಳಿಗಾಗಿ ಬಂದ ಮಕ್ಕಳು ಒಂಟೆ ಮೇಲೆ ಕುಳಿತು ಖುಷಿ ಪಡುತ್ತಾರೆ.

ಸಣ್ಣವರಿಗೆ 30 ರೂ, ದೊಡ್ಡೋರಿಗೆ 50 ರೂ. ಪಡೆಯುತ್ತೇವೆ. ಮನೆಯವರು ಕೊಟ್ಟ ಅಕ್ಕಿ ಬೆಲ್ಲವನ್ನು ಒಂಟೆಗಳಿಗೆ ತಿನಿಸುತ್ತೇವೆ. ಮುಂದೆ ರಾಮಸಾಗರ ಮೂಲಕ ಹಂಪಿ ಜಾತ್ರೆಗೆ ತೆರಳುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net