ಕಳ್ಳಿಲಿಂಗಸುಗೂರಿನಲ್ಲಿ ಬಾಲ್ಯವಿವಾಹ ತಡೆದ ಅಧಿಕಾರಿಗಳು

Unceasing child marriage in Kodagu
Published on

ಲಿಂಗಸುಗೂರು: ತಾಲೂಕಿನ ಕಳ್ಳಿಲಿಂಗಸುಗೂರು ಗ್ರಾಮದಲ್ಲಿ ಭಾನುವಾರ ನಡೆಯುತ್ತಿದ್ದ ಬಾಲ್ಯವಿವಾಹವನ್ನು ಪೊಲೀಸ್ ಮತ್ತು ಸಿಡಿಪಿಒ ಇಲಾಖೆ ಅಧಿಕಾರಿಗಳು ತಡೆದು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡಿದ್ದಾರೆ.

ವರನ ಸ್ವಗೃಹ ಕಳ್ಳಿಲಿಂಗಸುಗೂರು ಗ್ರಾಮದಲ್ಲಿ ರಮೇಶ (21) ಎಂಬ ಯುವಕನ ಮದುವೆ ಐದಬಾವಿ ಗ್ರಾಮದ ಲಕ್ಷ್ಮೀ (14.8) ಎಂಬ ಬಾಲಕಿಯೊಂದಿಗೆ ಏರ್ಪಾಟಾಗಿತ್ತು. ವಿಷಯ ತಿಳಿದ 112 ಪೊಲೀಸರು ಗ್ರಾಮಕ್ಕೆ ತೆರಳಿ ಮದುವೆ ನಿಲ್ಲಿಸಿ ಲಿಂಗಸುಗೂರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ.

ಬಳಿಕ ಪೊಲೀಸರ ಮಾಹಿತಿ ಮೇರೆಗೆ ಠಾಣೆಗೆ ಆಗಮಿಸಿದ ಹಿರಿಯ ಮೇಲ್ವಿಚಾರಕಿ ಬಸಮ್ಮ ಹಾಗೂ ಮೇಲ್ವಿಚಾರಕಿ ಸಂಕಮ್ಮ ವಧುವಿನ ಪಾಲಕರಿಗೆ ಬುದ್ಧಿವಾದ ಹೇಳಿ, ಅವರಿಂದ ಮುಚ್ಚಳಿಕೆ ಪತ್ರ ಬರೆಸಿ ಮನೆಗೆ ಕಳುಹಿಸಿದ್ದಾರೆ. ಭಾನುವಾರ ರಜೆ ಕಾರಣ ಸೋಮವಾರ ಬೆಳಗ್ಗೆ ವಧು-ವರರ ವಯಸ್ಸಿನ ದಾಖಲೆಗಳ ಸಹಿತ ಕಚೇರಿಗೆ ಬರುವಂತೆ ಪಾಲಕರಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net