ಜಯಂತಿಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ

3
ರಾಯಬಾಗ ತಹಸೀಲ್ದಾರ್ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸುರೇಶ ಮುಂಜೆ ಮಾತನಾಡಿದರು. ರಾಜೇಶ ಡಂಗ, ಸಂತೋಷ ಸುಂಬಳಿ, ಕಿರಣ ಚಂದರಗಿ, ಎಸ್.ಎಲ್.ಗುಗ್ಗರೆ, ಕುಮಾರ ಹಡಪದ, ಮಹಾಂತೇಶ ಹಳಿಜೋಳೆ ಇತರರಿದ್ದರು.
Published on

ರಾಯಬಾಗ: ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಜು.21ರಂದು ಹಮ್ಮಿಕೊಂಡಿರುವ ಹಡಪದ ಅಪ್ಪಣ್ಣ ಅವರ ಜಯಂತ್ಯುತ್ಸವದಲ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಸಮುದಾಯದ ಮುಖಂಡರು ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ತಹಸೀಲ್ದಾರ್ ಸುರೇಶ ಮುಂಜೆ ತಿಳಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತ್ಯುತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಯಂತ್ಯುತ್ಸವ ದಿನದಂದು ಎಲ್ಲ ತಾಲೂಕು ಕಚೇರಿಗಳಲ್ಲಿ ಕಡ್ಡಾಯವಾಗಿ ಹಡಪದ ಅಪ್ಪಣ್ಣ ಅವರ ಫೋಟೊ ಪೂಜೆ ಮಾಡಬೇಕೆಂದು ಸೂಚಿಸಿದರು.
ಪೂರ್ವಭಾವಿ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವುದಾಗಿ ತಹಸೀಲ್ದಾರ್ ತಿಳಿಸಿದರು.

ಪಂಚಾಯತ್ ರಾಜ್ ಇಲಾಖೆ ಎಇಇ ರಾಜೇಶ ಡಂಗ, ವಲಯ ಅರಣ್ಯಾಧಿಕಾರಿ ಸಂತೋಷ ಸುಂಬಳಿ, ಅಬಕಾರಿ ನಿರೀಕ್ಷಕ ಕಿರಣ ಚಂದರಗಿ, ಕಾರ್ಮಿಕ ಇಲಾಖೆ ಅಧಿಕಾರಿ ಎಸ್.ಎಲ್.ಗುಗ್ಗರೆ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಕುಮಾರ ಹಡಪದ, ಮಹಾಂತೇಶ ಹಳಿಜೋಳೆ, ಮಣಿಕಂಠ ನಾವಿ, ಹನುಮಂತ ನಾವಿ, ರಮೇಶ ನಾವಿ, ಅಶೋಕ ಹಡಪದ, ವಿಠ್ಠಲ ನಾವಿ, ಸದಾಶಿವ ಹಡಪದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net