ಜನಿವಾರ ತೆಗೆಸಿ ಸಮುದಾಯಕ್ಕೆ ಅಪಮಾನ

22sri-1
Published on

ಶೃಂಗೇರಿ: ಸಿಇಟಿ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಜನಿವಾರ ತೆಗೆಸಿ ಪರೀಕ್ಷೆ ಬರೆಯಲು

ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ತಾಲೂಕು

ಬ್ರಾಹ್ಮಣ ಮಹಾಸಭಾ ಸದಸ್ಯರು ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅನುಪ್

ಸಂಜೋಗ್‌ಗೆ ಮನವಿ ಸಲ್ಲಿಸಿದರು.

ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್ ಮಾತನಾಡಿ, ಸನಾತನ ಧರ್ಮ ಪ್ರಾಚೀನ ಕಾಲದಿಂದ

ಬಂದ ಪಾರಂಪರಿಕ ಧರ್ಮ. ಯಾರಾದರೂ ಅವರ ಸಂಪ್ರದಾಯ, ಪದ್ಧತಿ

ವಿರೋಧಿಸಬಾರದು. ಅವರ ಭಾವನೆಗಳ ಜತೆಗೆ ಚೆಲ್ಲಾಟವಾಡಬಾರದು. ಹಿಂದು ಸಂಸ್ಕೃತಿಗೆ

ಭವ್ಯ ಪರಂಪರೆ ಇದೆ. ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯುವಂತೆ

ಒತ್ತಡ ಹಾಕಿದ ಅಧಿಕಾರಿ ವರ್ತನೆಯನ್ನು ಬ್ರಾಹ್ಮಣ ಮಹಾಸಭಾ ಖಂಡಿಸುತ್ತದೆ. ಬ್ರಾಹ್ಮಣರ

ಧಾರ್ಮಿಕ ಭಾವನೆಗಳ ಜತೆ ಚೆಲ್ಲಾಟವಾಡುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು

ಎಂದರು.

ಜನಿವಾರ ತೆಗೆಸುವುದು ಕೆಇಎ ನಿಯಮದಲ್ಲಿ ಇಲ್ಲ. ಬೀದರ್‌ನಲ್ಲಿ ಜನಿವಾರ ಧರಿಸಿದ

ವಿದ್ಯಾರ್ಥಿಗೆ ಸಿಇಟಿ ಬರೆಯಲು ಅವಕಾಶ ನೀಡದ ಹಾಗೂ ಶಿವಮೊಗ್ಗದಲ್ಲಿ ವಿದ್ಯಾರ್ಥಿ

ಜನಿವಾರವನ್ನು ಕಿತ್ತೆಸೆದು ಧರ್ಮಕ್ಕೆ ಅಪಚಾರ ಮಾಡಿದ ಅಧಿಕಾರಿಗಳು ವಿದ್ಯಾರ್ಥಿಗಳ

ಭವಿಷ್ಯವನ್ನೂ ಕಿತ್ತುಕೊಂಡಿದ್ದಾರೆ ಎಂದು ದೂರಿದರು.

ಸಮದಾಯದ ಮುಖಂಡರಾದ ಕೊಡ್ತಲು ರಮೇಶ್ ಭಟ್, ಬಿ.ಎಲ್.ರವಿಕುಮಾರ್, ಸುಧೀಂದ್ರ

ಬೆಟ್ಟಗದ್ದೆ, ಅಂಬ್ಲೂರು ರಾಮಕೃಷ್ಣ, ಶ್ರೀಧರ್‌ರಾವ್ ಅಣ್ಣುಕೂಡಿಗೆ, ಅನಂದಸ್ವಾಮಿ,

ಮಹಾಬಲಭೀಡೆ, ಮೇಗಳಬೈಲು ಚಂದ್ರಶೇಖರ್, ವಿವೇಕಾನಂದ ಸುಂಕುರ್ಡಿ, ನಾಗಾನಂದ

ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net