ಜಮಾತ್‌ನಲ್ಲಿ ಪಾಲ್ಗೊಂಡವರ ತಪಾಸಣೆ

3Ainapur1-Web
ಕೃಷ್ಣಾ ಕಿತ್ತೂರಿನಲ್ಲಿ ದಾಂಡೇಲಿ ಜಮಾತ್‌ಗೆ ಹೋಗಿ ಬಂದವರನ್ನು ಡಾ. ಎಸ್.ಎಸ್. ಕೋಳಿ ತಪಾಸಣೆ ಮಾಡಿದರು. ಹರಿಬಾ ಹಂಚಿನಾಳ, ಲಕ್ಷ್ಮಣ ಯಲ್ಲಟ್ಟಿ, ಇತರರು ಇದ್ದರು.
Published on

ಐನಾಪುರ: ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ದಾಂಡೇಲಿ ಜಮಾತ್‌ನಲ್ಲಿ ಪಾಲ್ಗೊಂಡು ಮರಳಿದವರನ್ನು ಶುಕ್ರವಾರ ತಪಾಸಣೆ ಮಾಡಲಾಯಿತು.

ಲಾಕ್‌ಡೌನ್ ಆದ ಮರುದಿನ ಕೃಷ್ಣಾ ಕಿತ್ತೂರಿನ 8 ಜನರು ದಾಂಡೇಲಿ ಜಮಾತ್‌ನಲ್ಲಿ ಪಾಲ್ಗೊಂಡು ಗ್ರಾಮಕ್ಕೆ ಮರಳಿದ್ದರು. ಅವರಲ್ಲಿ ಕರೊನಾ ಸೋಂಕಿರಬಹುದು ಎಂದು ಸ್ಥಳೀಯರು ಆತಂಕಗೊಂಡಿದ್ದರು. ಐನಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್.ಎಸ್. ಕೋಳಿ ಹಾಗೂ ಹಿರಿಯ ಆರೋಗ್ಯ ಸಹಾಯಕ ಕೆ.ಬಿ. ಪವಾರ, ದಾಂಡೇಲಿ ಜಮಾತ್‌ಗೆ ಹೋಗಿ ಬಂದವರನ್ನು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಮುಖಂಡರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಮ್ಮುಖದಲ್ಲಿ ಗ್ರಾಪಂ ಕಾರ್ಯಾಲಯದಲ್ಲಿ ತಪಾಸಣೆ ಮಾಡಿದರು. ಎಂಟೂ ಜನರಿಗೆ ವೈರಸ್ ಸೋಂಕಿಲ್ಲ ಎಂದು ವೈದ್ಯಾಧಿಕಾರಿ ಎಸ್.ಎಸ್. ಕೋಳಿ ಹೇಳಿದರು. ಇದರಿಂದ ಜನರಲ್ಲಿನ ಆತಂಕ ದೂರವಾಗಿದೆ. ಎಂಟು ಜನರು ಲಾಕ್‌ಡೌನ್ ಮುಗಿಯುವ ತನಕ ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ವೈದ್ಯಾಧಿಕಾರಿ ತಾಕೀತು ಮಾಡಿದರು. ಹರಿಬಾ ಹಂಚಿನಾಳ, ಲಕ್ಷ್ಮಣ ಯಲ್ಲಟ್ಟಿ, ಸಿದ್ರಾಮ ಜಂಬಗಿ, ಅಣ್ಣಾಸಾಬ ಸತ್ತಿಕರ, ಮಹಾಲಿಂಗ ಹೊನವಾಡೆ, ರಾಜು ಮುಜಾವರ, ಮಹಾಂತೇಶ ಮದನೆ, ದಗಡು ಕರಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net