ಜಾಲಹಳ್ಳಿಯಲ್ಲಿ ಬಿಡಾಡಿ ದನಗಳ ಸೆರೆ

27 DVD 04
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ಗ್ರಾಪಂ ಹಾಗೂ ಪೊಲೀಸ್ ಇಲಾಖೆಯಿಂದ ಬಿಡಾಡಿ ದನಗಳನ್ನು ಸೆರೆ ಹಿಡಿಯಲಾಯಿತು. ಪಿಎಸ್‌ಐ ವೈಶಾಲಿ ಜಳಕಿ, ಯಂಕೋಬ ಪಲಕನಮರಡಿ, ಮುದ್ದುರಂಗಪ್ಪ ನಾಯಕ ಇದ್ದರು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿಯಲ್ಲಿ ಮಿತಿಮೀರಿದ್ದ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲು ಸ್ಥಳೀಯ ಗ್ರಾಪಂ ಹಾಗೂ ಪೊಲೀಸ್ ಇಲಾಖೆ ಮಂಗಳವಾರ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು ದನಗಳನ್ನು ಹಿಡಿಯುತ್ತಿದೆ.

ಪಟ್ಟಣದ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ವಾಲ್ಮೀಕಿ ವೃತ್ತ ಸೇರಿ ವಿವಿಧೆಡೆ ಕಾರ್ಯಾಚರಣೆ ನಡೆಸಿ 7ಬಿಡಾಡಿ ದನಗಳನ್ನು ಸೆರೆಹಿಡಿದು ಗ್ರಾಪಂ ಕಚೇರಿ ಹಿಂಭಾಗದಲ್ಲಿ ತೆರೆಯಲಾದ ಕೊಂಡವಾಡಿಗೆ ಬಿಡಲಾಯಿತು. ಪಟ್ಟಣದ ಕಲ್ಮಲಾ ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿ ಸೇರಿ ವಿವಿಧೆಡೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿತ್ತು. ರಸ್ತೆ ಮೇಲೆಯೇ ಮಲಗುವುದರಿಂದ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದರು.

ಬಿಡಾಡಿ ದನಗಳ ಹಾವಳಿ ಬಗ್ಗೆ ವಿಜಯವಾಣಿ ‘ಬಿಡಾಡಿ ದನಗಳ ಹಾವಳಿ ಬೇಸತ್ತ ಜನತೆ’ ಶೀರ್ಷಿಕೆಯಡಿ ಸುದ್ದಿಪ್ರಕಟಿಸಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ವರದಿಗೆ ಸ್ಪಂದಿಸಿದ ಗ್ರಾಪಂ ಹಾಗೂ ಪೊಲೀಸ್ ಇಲಾಖೆ ಎರಡ್ಮೂರು ದಿನಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ಸೆರೆ ಹಿಡಿಯುತ್ತಿದೆ. ಜತೆಗೆ ಪಟ್ಟಣದಲ್ಲಿ ದನಗಳನ್ನು ಬಿಡದಂಡೆ ಮೈಕ್‌ನಲ್ಲಿ ಜಾಗೃತಿ ಮೂಡಿಸಿ ಎಚ್ಚರಿಕೆ ನೀಡಲಾಗುತ್ತಿದೆ. ಅಧಿಕಾರಿಗಳ ಈ ಕಾರ್ಯಾಚರಣೆಯಿಂದ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net