ಅಂತಾರಾಜ್ಯ ಕಬಡ್ಡಿಯಲ್ಲಿ ಹಿಂದವಿ ಕೌಲವ ತಂಡ ಪ್ರಥಮ

web3
ರಾಯಬಾಗದಲ್ಲಿ ಅಂತಾರಾಜ್ಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಹಿಂದವಿ ಕೌಲವ ತಂಡದ ಸದಸ್ಯರ ಜತೆ ಅರುಣ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ದಯಾನಂದ ಬಂಬಲಾಡಿ, ವಿವೇಕಾನಂದ ಯಮಕನಮರಡಿ, ಶ್ರೀಮಂತ ಕಾಂಬಳೆ, ನೀಲಪ್ಪ ಐಹೊಳೆ, ಶೇಖರ ಹೊಸಮನಿ, ದೇವಪ್ಪ ಕಾಂಬಳೆ ಇದ್ದರು.
Published on

ರಾಯಬಾಗ: ಇಲ್ಲಿನ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶಾಖಾ ಮಠದ ಆವರಣದಲ್ಲಿ ದಸರಾ ಉತ್ಸವದ ಅಂಗವಾಗಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಜ್ಯ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಹಿಂದವಿ ಕೌಲವ ತಂಡ ಪ್ರಥಮ ಸ್ಥಾನ ಪಡೆದು 20 ಸಾವಿರ ನಗದು ಹಾಗೂ ಟ್ರೋಫಿ ಪಡೆದುಕೊಂಡಿತು.

ಚಿಂಚಲಿಯ ಜೈ ಮಹಾಕಾಳಿ ತಂಡ ದ್ವಿತೀಯ 15 ಸಾವಿರ ನಗದು ಮತ್ತು ಟ್ರೋಫಿ, ಮಹಿಷವಾಡಿಯ ಸಾಧನಾ ಸ್ಪೋರ್ಟ್ಸ್ ಕ್ಲಬ್ ತಂಡ 10 ಸಾವಿರ ನಗದು ಮತ್ತು ಟ್ರೋಫಿ ಪಡೆದು ತೃತೀಯ ಹಾಗೂ ಚತುರ್ಥ ಸ್ಥಾನ ಪಡೆದ ಭಿರಡಿಯ ರಾಯಣ್ಣ ಗೋ ಗ್ರೀನ್ ತಂಡ 5 ಸಾವಿರ ನಗದು ಮತ್ತು ಟ್ರೋಫಿ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆ ಹಾಗೂ ಮಹಾರಾಷ್ಟ್ರದ ಒಟ್ಟು 14 ತಂಡಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net