ಭಾರತದಲ್ಲಿದೆ ಎಲ್ಲರಿಗೂ ಸಮಾನ ಹಕ್ಕು

26MDLG1
Published on

ಮೂಡಲಗಿ: ಭಾರತ ಒಂದು ಜಾತ್ಯತಿತ ರಾಷ್ಟ್ರ. ಭಾರತದಲ್ಲಿ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕಿದೆ. ಶಿಣ, ಸಮಾನತೆ, ವಾಕ್​ ಸ್ವಾತಂತ್ರ್ಯ, ಜೀವಿಸುವ ಹಕ್ಕು ಎಲ್ಲರಿಗೂ ಸಮಾನವಾಗಿವೆ ಎಂದು ತಹಸೀಲ್ದಾರ್​ ಶಿವಾನಂದ ಬಬಲಿ ಹೇಳಿದರು.

ಪಟ್ಟಣದಲ್ಲಿ ತಾಲೂಕಾಡಳಿತ ಹಾಗೂ ಪುರಸಭೆ ವತಿಯಿಂದ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಪುರಸಭೆ ಅಧ್ಯೆ ಖುರ್ಷಾದ್​ ನದ್​ಾ ಮತ್ತು ಬಿಜಿಒ ಅಜಿತ್​ ಮನ್ನಿಕೇರಿ ಮಾತನಾಡಿ, ಡಾ. ಬಿ.ಆರ್​. ಅಂಬೇಡ್ಕರ್​ ರಚಿಸಿರುವ ಸಂವಿಧಾನವನ್ನು ನಾವೆಲ್ಲರೂ ಗೌರವಿಸುವ ಜತೆಗೆ ಅದರ ಆಶಯಗಳನ್ನು ಎತ್ತಿಹಿಡಿಯಬೇಕು ಎಂದರು.

ಪಟ್ಟಣದ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸತಿಕ ಚಟುವಟಿಕೆಗಳು ಜರುಗಿದವು, ನಿಸರ್ಗ ೌಂಡೇಷನ್​ ವತಿಯಿಂದ ವಿವಿಧ ಸ್ಪರ್ಧೆಗಳ ವಿಜೇತ ಶಾಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪುರಸಭೆಯ ಉಪಾಧ್ಯೆ ಭೀಮವ್ವ ಪೂಜೇರಿ, ತಾಪಂ ಇಒ ಎ್​.ಜಿ. ಚಿನ್ನನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಸಿಪಿಐ ಶ್ರೀಶೆಲ ಬ್ಯಾಕೂಡ, ಪಿಎಸ್​ಐ ರಾಜು ಪೂಜೇರಿ, ಪುರಸಭೆ ಅಧಿಕಾರಿ ತುಕಾರಾಮ ಮಾದರ, ಹೆಸ್ಕಾಂ ಅಧಿಕಾರಿ ಎಂ.ಎಸ್​. ನಾಗನ್ನವರ, ಪುರಸಭೆ ಸದಸ್ಯರು, ಮುಖಂಡರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net