ಹೂವಿನಹೆಡಗಿಯಲ್ಲಿ ಒಡೆದ ಪೈಪ್‌ಲೈನ್ ರಿಪೇರಿ

dvd pipe repari
ಹೂವಿನಹೆಡಗಿಯಲ್ಲಿ ಒಡೆದ ಕುಡಿವ ನೀರಿನ ಪೈಪ್‌ಲೈನ್ ರಿಪೇರಿ ಮಾಡುತ್ತಿರುವುದು.
Published on

ದೇವದುರ್ಗ: ತಾಲೂಕಿನ ಹೂವಿನಹೆಡಗಿ ಗ್ರಾಮದಲ್ಲಿ ಹಲವು ದಿನಗಳಿಂದ ಒಡೆದಿದ್ದ ಕುಡಿವ ನೀರು ಸರಬರಾಜು ಪೈಪ್‌ಲೈನ್‌ಗೆ ರಿಪೇರಿ ಭಾಗ್ಯ ಕೂಡಿಬಂದಿದೆ. ದೊಂಡಂಬಳಿ ಗ್ರಾಪಂ ಆಡಳಿತ ಮಂಡಳಿ ಗುರುವಾರ ಹೊಸಪೈಪ್ ಜೋಡಣೆ ಮಾಡಿದೆ.

ಕೃಷ್ಣಾನದಿಯಲ್ಲಿ ನಿರ್ಮಿಸಿರುವ ಜಾಕ್‌ವೆಲ್‌ನಿಂದ ಹೂವಿನಹೆಡಗಿ ಗ್ರಾಮಕ್ಕೆ ಕುಡಿವ ನೀರು ಪೂರೈಕೆ ಮಾಡಲಾಗುತ್ತಿತ್ತು. ಹಲವು ದಿನಗಳ ಹಿಂದೆ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿತ್ತು. ಇದರಿಂದ ಮನೆಮನೆಗೆ ಕಲುಷಿತ ನೀರು ಪೂರೈಕೆಯಾಗುವ ಜತೆಗೆ ಎಲ್ಲೆಂದರಲ್ಲಿ ನೀರು ನಿಂತು ಗ್ರಾಮಸ್ಥರಿಗೆ ತೀವ್ರ ಸಮಸ್ಯೆಯಾಗಿತ್ತು.

ಈ ಕುರಿತು ವಿಜಯವಾಣಿ ಸೆ.9ರಂದು ‘ಹೂವಿನಹೆಡಗಿ ಗ್ರಾಮಕ್ಕೆ ಅಶುದ್ಧ ಜಲ ಪೂರೈಕೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತುಕೊಂಡ ಗ್ರಾಪಂ ಆಡಳಿತ ಬೆಳಗ್ಗೆ ಜೆಸಿಬಿಯಿಂದ ಒಡೆದ ಪೈಪ್‌ಲೈನ್ ತೆರವು ಮಾಡಿ ಹೊಸ ಪೈಪ್ ಅಳವಡಿಸಿದೆ. ಇದರಿಂದ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net