ಹುಂಡಿಯಲ್ಲಿ 38 ಲಕ್ಷ ರೂ.ಸಂಗ್ರಹ

16 LNG 02
ಲಿಂಗಸುಗೂರು ತಾಲೂಕಿನ ಅಮರೇಶ್ವರ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯದಲ್ಲಿ ತೊಡಗಿದ ಸಿಬ್ಬಂದಿ.
Published on

ಲಿಂಗಸುಗೂರು: ಇತಿಹಾಸ ಪ್ರಸಿದ್ಧ ತಾಲೂಕಿನ ಸುಕ್ಷೇತ್ರ ಅಮರೇಶ್ವರ ದೇವಸ್ಥಾನದ ನಾಲ್ಕು ಹುಂಡಿಗಳ

ಹಣವನ್ನು ಎಸಿ ಬಸವಣೆಪ್ಪ ಕಲಶೆಟ್ಟಿ ಹಾಗೂ ತಹಸೀಲ್ದಾರ್ ಶಂಶಾಲಂ ನೇತೃತ್ವದಲ್ಲಿ ಇತ್ತೀಚೆಗೆ ಎಣಿಕೆ ಕಾರ್ಯ ನಡೆಯಿತು.

ಒಟ್ಟು 38,32,010 ರೂ. ಸಂಗ್ರಹವಾಗಿದ್ದು, ಕಂದಾಯ ಇಲಾಖೆ, ದೇವಸ್ಥಾನ ಸಿಬ್ಬಂದಿ ಎಣಿಕೆಯಲ್ಲಿ ತೊಡಗಿದ್ದರು.

ಚಿನ್ನ, ಬೆಳ್ಳಿ ಆಭರಣಗಳನ್ನು ದೇವರಿಗೆ ಭಕ್ತರು ಸಮರ್ಪಿಸಿದ್ದು, ಬೆಳ್ಳಿಯ ಬಸವನ ಮೂರ್ತಿಗಳು, ಕುದುರೆಗಳು, ತೊಟ್ಟಿಲುಗಳು, ಕಾಲುಂಗುರಗಳು, ಕೈ ಬಳೆಗಳು, ನಾಣ್ಯಗಳು, ದೇವರ ಕೋರೆ ಮೀಸೆ, ಕಣ್ಣುಗಳು, ಪಾದಗಳು, ಲಿಂಗದ ಕಾಯಿ, ಕಾಲುಕಡಗ, ಬೆಳ್ಳಿ ತಟ್ಟಿ, ಲಾಕೆಟ್, ಮೂಗಿನ ನತ್ತುಗಳನ್ನು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net