

ಹುಕ್ಕೇರಿ: ತಾಲೂಕಿನಲ್ಲಿ ಮತದಾನ ಪ್ರಕ್ರಿಯೆ ಮಂಗಳವಾರ ಶಾಂತಿಯುತವಾಗಿ ಜರುಗಿತು. ಪಟ್ಟಣದ ಬೂತ್ ನಂ.158 ರಲ್ಲಿ ಮತ ಯುನಿಟ್ ತೊಂದರೆಯಿಂದ ಮತ ಚಲಾವಣೆಗೆ ಕೆಲ ಸಮಯ ವಿಳಂಬವಾಯಿತು.
ಎಲಿಮುನ್ನೋಳಿ ಗ್ರಾಮದ ಕನ್ನಡ ಹೆಣ್ಣುಮಕ್ಕಳ ಶಾಲೆಯ ವಾರ್ಡ್ ನಂ.4ರಲ್ಲಿ ಮತ ಚಲಾವಣೆಗೆ ಸರತಿಯಲ್ಲಿ ನಿಂತಿದ್ದ ಯುವಕನನ್ನು ಹಿಂದಿಕ್ಕಿ ಮತ್ತೋರ್ವ ಯುವಕ ಮತ ಚಲಾಯಿಸಲು ಮುಂದಾದಾಗ ಗೊಂದಲ, ವಾದ ವಿವಾದ ಪ್ರಾರಂಭವಾಯಿತು. ತಕ್ಷಣ ಗ್ರಾಮದ ಹಿರಿಯರು ಮತ್ತು ಪೊಲೀಸ್ ಸಿಬ್ಬಂದಿ ಗದ್ದಲ ನಿಯಂತ್ರಿಸಿ ಶಾಂತಗೊಳಿಸಿದರು.