ಮೂಳೆ-ಕೀಲು ಶಸ್ತ್ರ ಚಿಕಿತ್ಸಾ ಸಮಾಲೋಚನೆ

Glenigals
Published on

ಹುಬ್ಬಳ್ಳಿ: ಬೆಂಗಳೂರಿನ ಗ್ಲೇನಿಗಲ್ಸ್ ಬಿಜಿಎಸ್ ಆಸ್ಪತ್ರೆಯ ಖ್ಯಾತ ಮೂಳೆ ಚಿಕಿತ್ಸೆ ಹಾಗೂ ಕೀಲು ಮರು ಜೋಡಣಾ ಶಸ್ತ್ರಚಿಕಿತ್ಸಾ ತಜ್ಞ ಡಾ. ಬಸವರಾಜ ಸಿ.ಎಂ. ಧಾರವಾಡದ ಮರಾಠಾ ಕಾಲನಿಯ ವಿಆರ್​ಎಲ್ ಆಫೀಸ್ ಹತ್ತಿರವಿರುವ ರಾಮನಗೌಡರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆ. 17ರಂದು ಮಧ್ಯಾಹ್ನ 1ರಿಂದ 2 ಗಂಟೆಯವರೆಗೆ ಸಮಾಲೋಚನೆಗೆ ಲಭ್ಯರಿರುತ್ತಾರೆ.

ಅವರು ಹುಬ್ಬಳ್ಳಿಯ ದಾಜೀಬಾನಪೇಟೆಯಲ್ಲಿರುವ ಸಿಟಿ ಕ್ಲಿನಿಕ್​ನಲ್ಲಿ ಮಧ್ಯಾಹ್ನ 2.30 ರಿಂದ ಸಂಜೆ 4.30ರ ವರೆಗೆ ಹಾಗೂ ತತ್ವದರ್ಶ ಆಸ್ಪತ್ರೆ ರಸ್ತೆಯಲ್ಲಿರುವ ಶ್ರೀಯಾ ಪರ್ಲ್ ಬಿಲ್ಡಿಂಗ್ ಪಕ್ಕದಲ್ಲಿರುವ ಡಾ. ಚಟ್ನಿ ಪಾಲಿ ಕ್ಲಿನಿಕ್​ನಲ್ಲಿ ಸಂಜೆ 4.30 ರಿಂದ 6 ಗಂಟೆಯವರೆಗೆ ಸಮಾಲೋಚನೆಗೆ ಲಭ್ಯರಿರುವರು.

ಕೀಲು ನೋವು, ಮೊಳಕಾಲು ನೋವು, ಕೀಲು ಮರು ಜೋಡಣೆ, ಹಿಪ್ ಮರುಜೋಡಣೆ, ರಿವಿಷನ್ ಶಸ್ತ್ರ ಚಿಕಿತ್ಸೆ ಮುಂತಾದ ವಿಷಯಗಳ ಬಗ್ಗೆ ತಜ್ಞರ ಜೊತೆ ಸಮಾಲೋಚನೆ ಮಾಡಲು ಬಯಸುವವರು ಆಸ್ಪತ್ರೆಗೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net