ಹಲವಾಗಲಿಯಲ್ಲಿ ಶ್ರೀದೇವಿಪುರಾಣ ಪ್ರಾರಂಭ ನಾಳೆ

Untitled design (1)
ಹಲವಾಗಲಿ ಗ್ರಾಮದೇವತೆ ದೇವಸ್ಥಾನ.
Published on

ಅಳವಂಡಿ: ಸಮೀಪದ ಹಲವಾಗಲಿ ಗ್ರಾಮದಲ್ಲಿ 34ನೇ ವರ್ಷದ ಶ್ರೀದೇವಿಪುರಾಣವನ್ನು ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ, ಮುಂಡರಗಿಯ ಶ್ರೀ.ಜ.ಅನ್ನದಾನೇಶ್ವರ ಮಹಾ ಸ್ವಾಮೀಜಿ ಅಪ್ಪಣೆಯ ಮೇರೆಗೆ ಪ್ರತಿ ವರ್ಷದಂತೆ ಗ್ರಾಮದೇವತೆ ದೇವಸ್ಥಾನದಲ್ಲಿ ಅ.15 ರಿಂದ ಅ.24 ರವರೆಗೆ ನಡೆಯಲಿದೆ.


ಶ್ರೀ.ಜ.ಅನ್ನದಾನೇಶ್ವರ ಮಹಾ ಸ್ವಾಮೀಜಿ, ಶ್ರೀ ಮರುಳಾರಾದ್ಯ ಶಿವಾಚಾರ್ಯರು ಭಾನುವಾರ ಸಂಜೆ ಪುರಾಣ ಪ್ರಾರಂಭೋತ್ಸವದ ಕಾರ್ಯಕ್ರಮದ ಸಾನಿಧ್ಯವಹಿಸಲಿದ್ದಾರೆ. ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಿರೇಸಿಂದೋಗಿ ಕಾಲೇಜಿನ ಉಪನ್ಯಾಸಕ ವೀರಶೇಖರ ಪತ್ತಾರ ಜ್ಯೋತಿ ಬೆಳಗಿಸಲಿದ ನಂತರ ಪುರಾಣ ಪ್ರಾರಂಭವಾಗಲಿದೆ.


ಪುರಾಣ ಪ್ರವಚನಕಾರರಾಗಿ ಹಿರೇಕುಂಬಿಯ ಶ್ರೀ.ಪಂ. ವಸಂತ ಆಚಾರ್ಯ ಶಾಸ್ತ್ರೀಗಳು, ಸಂಗೀತಕಾರರಾಗಿ ಅಬ್ಬಿಗೇರಿಯ ಬಸವರಾಜ ಹನುಮನಾಳ, ತಬಲಾ ವಾದಕರಾಗಿ ಕುರಹಟ್ಟಿಯ ಬಸವರಾಜ ಹಂಸಪ್ರಸಾದ ಕಾರ್ಯಕ್ರಮ ನಡೆಸಲಿದ್ದಾರೆ. ಅ.24 ಪುರಾಣ ಮಂಗಲ ಕಾರ್ಯಕ್ರಮ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net