ಹಡಗಲಿಯಲ್ಲಿ ಊರಮ್ಮ ದೇವಿ ಜಾತ್ರೆ ಸಂಭ್ರಮ

22 DHLP 01
ಹೂವಿನಹಡಗಲಿಯಲ್ಲಿ ಮಂಗಳವಾರ ರಾತ್ರಿ ಗ್ರಾಮ ದೇವತೆ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Published on

ಹೂವಿನಹಡಗಲಿ: ಪಟ್ಟಣದ ಗ್ರಾಮ ದೇವತೆ ಊರಮ್ಮ ದೇವಿ ಉತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು. ಬುಧವಾರ ದೇವಿಗೆ ಭಕ್ತರು ಹರಕೆ ತೀರಿಸಿದರು.

ಮಂಗಳವಾರ ಮುತ್ತೈದೆಯರು ದೇವಿಗೆ ಉಡಿ ತುಂಬುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಿಗೆ ದೃಷ್ಠಿ ತಗೆಯುವ ಮೂಲಕ ಪಟ್ಟಣದ ಗೌಡರ ಓಣಿ, ಈಟಿಯವರ ಓಣಿ, ಬಿಚ್ಚುಗತ್ತಿ ಓಣಿ ಮೂಲಕ ಚೌತಿಮನೆ ಕಟ್ಟೆವರೆಗೆ ಮೆರವಣಿಗೆ ನಡೆಸಿದರು.

ಡೊಳ್ಳು ಕುಣಿತ, ಹಲಗಿ, ಸಮಾಳ, ಶಹನಾಯಿ, ಡ್ರಮ್ ಸೆಟ್, ಇತರ ಮಂಗಳವಾದ್ಯಗಳ ಸಾಗಿದ ಉತ್ಸವ ಮೂರ್ತಿಗಳ ಮೆರವಣಿಗೆಯಲ್ಲಿ ಮದ್ದುಗಳನ್ನು ಸುಡಲಾಯಿತು.


ಭಕ್ತರು ಮನೆಯಿಂದ ಚೌತಿಕಟ್ಟೆವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರೆ. ಕೆಲವರು ಬೆಳ್ಳಿ ಆಭರಣ ಇತರ ಸಾಮಗ್ರಿಗಳನ್ನು ದೇವಿಗೆ ಸಮರ್ಪಿಸಿದರು. ಬುಧವಾರ ಬೆಳಗ್ಗೆ ಊರಿನ ಸುತ್ತಲೂ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಹುಲುಸು (ಚೆರಗ) ಚೆಲ್ಲಲಾಯಿತು.

ನಂತರ ಚೌತಿ ಮನೆಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಸಂಪ್ರದಾಯದಂತೆ ಹಾಡು ಹಾಗೂ ನೃತ್ಯ ಕಾರ್ಯಕ್ರಮ ನಡೆಯಿತು. ಜಾತ್ರೆ ಆರಂಭಕ್ಕೆ ಊರಿನ ಸುತ್ತ ಹಾಕಲಾಗಿದ್ದ ಅಗಸಿಯನ್ನು ಬುಧವಾರ ಚರಗ ಚೆಲ್ಲಿದ ಮೇಲೆ ತೆರವುಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net