ಗುಡೇಕೋಟೆಯಲ್ಲಿ ಓಬವ್ವ ಪ್ರತಿಮೆ ನಿರ್ಮಿಸಲಿ

Kanahosalli Obavva Jayanti
ಗುಡೇಕೋಟೆಯಲ್ಲಿ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ತಾಪಂ ಮಾಜಿ ಸದಸ್ಯ ಎಂ.ಶಿವಪ್ರಸಾದ್ ಗೌಡ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ, ಕರವೇ ಅಧ್ಯಕ್ಷ ಜೆ.ಶಿವಕುಮಾರ್, ಪೇಂಟ್ ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ಎಸ್.ಬೊಮ್ಮಣ್ಣ, ಮಂಜುನಾಥ, ಸುದರ್ಶನ ಶೆಟ್ಟಿ, ಗಾಯತ್ರಿ ಇದ್ದರು.
Published on

ಕಾನಹೊಸಹಳ್ಳಿ: ಒಬ್ಬ ಕಾವಲುಗಾರನ ಪತ್ನಿ, ಸಾಮಾನ್ಯ ಮಹಿಳೆ ಒನಕೆ ಓಬವ್ವ ಚರಿತ್ರೆಯಲ್ಲಿ ಸ್ಥಾನ ಪಡೆದಿದ್ದು ರೋಚಕ ಸಂಗತಿ ಎಂದು ತಾಪಂ ಮಾಜಿ ಸದಸ್ಯ ಎಂ.ಶಿವಪ್ರಸಾದ್ ಗೌಡ ಹೇಳಿದರು.

ಗುಡೇಕೋಟೆ ಪಬ್ಲಿಕ್ ಶಾಲಾ ಅವರಣದಲ್ಲಿ ಸೋಮವಾರ ರಾತ್ರಿ ಗ್ರಾಮಸ್ಥರ ಸಹಕಾರದೊಂದಿಗೆ ಕರವೇ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಓಬವ್ವ ಶೌರ್ಯ, ಸಾಹಸ, ಸಮಯ ಪ್ರಜ್ಞೆ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ತವರೂರಾದ ಗುಡೇಕೋಟೆಯಲ್ಲಿ ಓಬವ್ವ ಪ್ರತಿಮೆ ನಿರ್ಮಿಸುವ ಮೂಲಕ ಸರ್ಕಾರ ಗೌರವ ಸಲ್ಲಿಸಬೇಕು. ಪಾಳೇಗಾರನ ಸಂಸ್ಥಾನವಾಗಿರುವ ಕಾರಣ ಅನೇಕ ಸ್ಮಾರಕ ಮತ್ತು ಕರಡಿಧಾಮವಿರುವುದರಿಂದ ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತ ಭೀಮಸಮುದ್ರ ರಂಗನಾಥ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಕರವೇ ಅಧ್ಯಕ್ಷ ಜೆ.ಶಿವಕುಮಾರ್, ಪೇಂಟ್ ತಿಪ್ಪೇಸ್ವಾಮಿ, ಗ್ರಾಪಂ ಸದಸ್ಯ ಎಸ್.ಬೊಮ್ಮಣ್ಣ, ಮಂಜುನಾಥ, ಸುದರ್ಶನ ಶೆಟ್ಟಿ, ಎಂ.ರಾಜಣ್ಣ, ಬಣಕಾರ ಮಲ್ಲಿಕಾರ್ಜುನ, ರಘುವೀರ, ನಾಗರಾಜ್, ಇಂದ್ರೇಶ್.ಕೆ.ದೇವೇಂದ್ರಪ್ಪ, ಗಾಯತ್ರಿ ಇತರರಿದ್ದರು.

ಇದಕ್ಕೂ ಮುನ್ನ ಓಬವ್ವನ ಭಾವಚಿತ್ರ ಮೆರೆವಣಿಗೆ ನಡೆಸಲಾಯಿತು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net