ಗೋವಾದಲ್ಲಿ ಬೀಡುಬಿಟ್ಟ ಯುವಕರ ದಂಡು

31BGV Jaggu3-Web
ಗೋವಾದ ಬೀಚ್‌ಗಳಲ್ಲಿ ಗುರುವಾರ ಕಂಡು ಬಂದ ಯುವಸಮೂಹ.
Published on

ಬೆಳಗಾವಿ: ಕರೊನಾ ಸೋಂಕು ಹರಡುವ ಭೀತಿಯಿಂದ ರಾಜ್ಯ ಸರ್ಕಾರ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಯುವಕರ ದಂಡು ಗೋವಾದಲ್ಲಿ ಬೀಡುಬಿಟ್ಟಿವೆ.

ರಾಜ್ಯ ಹಾಗೂ ಹೊರ ರಾಜ್ಯದ ಯುವಕರ ದಂಡು ಖಾಸಗಿ ಬಸ್, ಬೈಕ್ ಹಾಗೂ ಕಾರ್ ಮೂಲಕ ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ ತೆರಳಿದ್ದಾರೆ. ತೆಲಂಗಾಣ, ಮಹಾರಾಷ್ಟ್ರ, ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜನ ಗೋವಾದ ಬೀಚ್‌ಗಳಲ್ಲಿದ್ದಾರೆ. ಗೋವಾದಲ್ಲಿ ಗುರುವಾರ ಸಂಜೆ 45 ಲಕ್ಷಕ್ಕೂ ಅಧಿಕ ಪ್ರವಾಸಿಗರು ಸೇರುವ ನಿರೀಕ್ಷೆ ಇದೆ. ಈ ವಿಚಾರವಾಗಿ ಈಗಾಗಲೇ ಗೋವಾ ಸಿಎಂ ಪ್ರಮೋದ ಸಾವಂತ ಮಾಹಿತಿ ಹಂಚಿಕೊಂಡಿದ್ದಾರೆ. ಗೋವಾದ ಕಡಲ ತೀರದಲ್ಲಿ ಹೊಸ ವರ್ಷಾಚರಣೆ ಸಂಭ್ರಮ ರಂಗೇರಲಿದೆ. ಪ್ರತಿಯೊಬ್ಬರೂ ಕೋವಿಡ್ ನಿಯಮ ಪಾಲಿಸುವಂತೆ ಗೋವಾ ಸರ್ಕಾರದಿಂದ ಕಟ್ಟುನಿಟ್ಟಿನ ಸೂಚನೆ ಹೊರಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net