ಗಂದಿಗವಾಡದಲ್ಲಿ ಕಬ್ಬಿನ ಗದ್ದೆಗೆ ಬೆಂಕಿ

5 Khanapur6-Web
ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ಬಳಿ ಬೆಂಕಿ ತಗುಲಿ ಕಟಾವಿಗೆ ಬಂದಿದ್ದ ಕಬ್ಬು ಸುಟ್ಟಿರುವುದು.
Published on

ಖಾನಾಪುರ: ತಾಲೂಕಿನ ಗಂದಿಗವಾಡ ಗ್ರಾಮದ ಬಳಿ ಕಬ್ಬಿನ ಗದ್ದೆಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿದ ಪರಿಣಾಮ ಅಪಾರ ಪ್ರಮಾಣದ ಕಬ್ಬು ಸುಟ್ಟ ಘಟನೆ ಶನಿವಾರ ವರದಿಯಾಗಿದೆ. ಗ್ರಾಮದ ರೈತರಾದ ಬಸವರಾಜ ಹಿಟ್ಟಿನ, ರಾಮಾ ನಾಯಕರ, ಬಸಪ್ಪ ಅಂಬಡಗಟ್ಟಿ, ಪಾರೀಶ ಮಂಡೇದ ಎಂಬುವರ ಕಬ್ಬು ಸುಟ್ಟಿದೆ. ಸ್ಥಳಕ್ಕೆ ಎಂ.ಕೆ ಹುಬ್ಬಳ್ಳಿಯ ರಾಣಿ ಶುಗರ್ಸ್ ಅಧ್ಯಕ್ಷ ನಾಸೀರ್ ಬಾಗವಾನ, ನಿರ್ದೇಶಕ ಅಶೋಕ ಯಮಕನಮರಡಿ ಭೇಟಿ ನೀಡಿ, ಸುಟ್ಟ ಕಬ್ಬನ್ನು ಕಾರ್ಖಾನೆಗೆ ಸಾಗಿಸಿ ನುರಿಸುವುದಾಗಿ ಮತ್ತು ರೈತರಿಗಾದ ನಷ್ಟಕ್ಕೆ ಸರ್ಕಾರದಿಂದ ಮತ್ತು ಕಾರ್ಖಾನೆಯಿಂದ ಸೂಕ್ತ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net