ಗದ್ದಿಕೆರೆ ಗ್ರಾಮದಲ್ಲಿ ಸೆರೆ ಸಿಕ್ಕ ಕರಡಿ

Hbhalli Karadi
ಗದ್ದಿಕೆರೆ ಗ್ರಾಮದಲ್ಲಿ ಮರವೇರಿ ಕುಳಿತಿದ್ದ ಕರಡಿ.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಗದ್ದಿಕೆರೆಯಲ್ಲಿ ಮರವೇರಿ ಕುಳಿತಿದ್ದ ಕರಡಿಯನ್ನು ಗುರುವಾರ ಅರಣ್ಯಾಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

ಗುರುವಾರ ಬೆಳಗ್ಗೆ 6ಗಂಟೆಗೆ ಗದ್ದಿಕೆರೆ ಗ್ರಾಮದ ಛಲವಾದಿ ಓಣಿಯಲ್ಲಿ ಪ್ರತ್ಯಕ್ಷವಾದ ಕರಡಿಯನ್ನು ನೋಡಿದ ಜನರು ಭಯಗೊಂಡಿದ್ದರು. ಜನರು ಕೂಗಾಡಿ ಗಲಾಟೆ ಮಾಡಿದ್ದರಿಂದ ಕರಡಿ ಮರವೇರಿ ಕುಳಿತಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಕರಡಿಗೆ ಅರಿವಳಿಕೆ ಔಷಧ ನೀಡುವ ಮೂಲಕ ಪ್ರಜ್ಞೆತಪ್ಪಿಸಿ ಬಳಿಕ ಕೆಳಗಿಳಿಸಿದರು. ಅದರ ಕುತ್ತಿಗೆ ಸುತ್ತ ಗಾಯವಾಗಿದ್ದಕ್ಕೆ ಚಿಕಿತ್ಸೆ ನೀಡಿದರು.

ಅರಣ್ಯ ಅಧಿಕಾರಿ ಕರಿಬಸಪ್ಪ ಮಾತನಾಡಿ, ಮೇಲಧಿಕಾರಿಗಳ ಗಮನಕ್ಕೆ ತಂದು ಕರಡಿಯನ್ನು ದರೋಜಿ ಅಥವಾ ಗುಡೇಕೋಟೆ ಕರಡಿಧಾಮಕ್ಕೆ ಬಿಡಲಾಗುವುದು ಎಂದು ತಿಳಿಸಿದರು.

ಹಡಗಲಿಯ ವಲಯ ಅರಣ್ಯಾಧಿಕಾರಿ ರೇಣುಕಾ, ಉಪ ವಲಯ ಅರಣ್ಯಾಧಿಕಾರಿಗಳಾದ ತಿರುಮಲೇಶ, ಸಾಗರ್, ಶ್ರೀಕಾಂತ್, ರಾಮು, ಹಂಪಿ ಕಿರಿಯ ವೈದ್ಯಾಧಿಕಾರಿ ವಾಣಿ ಮತ್ತು ತಂಡ, ಅರಣ್ಯ ರಕ್ಷಕರಾದ ರಾಜೇಂದ್ರ ಕುಮಾರ್, ಮಂಜುನಾಥ, ವೀಕ್ಷಕರಾದ ನಾಗರಾಜ್, ಮಂಜುನಾಥ, ಮಲ್ಲಿಕಾರ್ಜುನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net