ನಾಲ್ಕೈದು ದಿನಗಳಲ್ಲಿ 86ನಾಟಿ ಕೋಳಿ ಸಾವು

Published on

ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕಳೆದ 4-5 ದಿನಗಳಿಂದ ನಾಟಿ ಕೋಳಿ ಸಾವಿಗೀಡಾಗುತ್ತಿವೆ. ಚೆನ್ನಾಗಿರುವ ಕೋಳಿಗಳು ಇದ್ದಕ್ಕಿದ್ದಂತೆ ಮಂಕಾಗಿ ಸಾಯುತ್ತಿವೆ.

ಫೆ.26ರಿಂದ ಗೌಡ್ರು ನಾಗಮ್ಮನ ಅವರ 26ನಾಟಿಕೋಳಿ, ಕುರೇಕುಪ್ಪ ಚಂದ್ರಪ್ಪ ಹಾಗು ಹೊದಿಗೇರಿ ಜಡೆಪ್ಪ ಅವರ 30ನಾಟಿ ಕೋಳಿಗಳು ಸತ್ತಿವೆ.

ಬುಧವಾರ 15, ಗುರುವಾರ 5, ಶುಕ್ರವಾರ 6 ಸೇರಿ ಒಟ್ಟು 26ನಾಟಿ ಕೋಳಿಗಳು ಸತ್ತಿವೆ ಎಂದು ಗೌಡ್ರು ನಾಗಮ್ಮ ಬುಡುಗಣ್ಣ ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ.

ದೇವಲಾಪುರ ಗ್ರಾಮದಲ್ಲಿ ನಾಟಿ ಕೋಳಿಗಳು ಸತ್ತ ವಿಷಯ ಗಮನಕ್ಕೆ ಬಂದಿಲ್ಲ. ಅಲ್ಲಿನ ನಾಟಿ ಕೋಳಿಗಳ ಮಾದರಿ ಸಂಗ್ರಹಿಸಿ ಬಳ್ಳಾರಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಿಕೊಡಲಾಗುವುದು ಎಂದು ಕಂಪ್ಲಿಯ ಪ್ರಭಾರಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಯು.ಬಸವರಾಜ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net