

ಮೂಡಲಗಿ: ತುಕ್ಕಾನಟ್ಟಿ ಲಕ್ಷ್ಮೀದೇವಿ ಜಾತ್ರೆ ನಿಮಿತ್ತ ಜರುಗುವ ಹಸರಬ್ಬವು ತನ್ನದೆಯಾದ ಪ್ರಸಿದ್ಧಿ ಪಡೆದಿದ್ದು, ಹಲವು ವಿಶೇಷತೆಗಳಿಂದ ಕೂಡಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಬುಧವಾರ ಲಕ್ಷ್ಮೀದೇವಿ ದರ್ಶನ ಪಡೆದು ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಮತದಾರರು ಬಿಜೆಪಿ ಕೈ ಹಿಡಿಯಲಿಲ್ಲ. ಈಗಿರುವ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ. ಇದರಿಂದ ಹೊಸ ಕಾಮಗಾರಿಗಳಿಗೆ ಅನುಮೋದನೆ ಸಿಗುತ್ತಿಲ್ಲ. ಮುಂದಿನ ತಿಂಗಳು ನಡೆಯುವ ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಜತೆಗೆ 2024ರಲ್ಲಿ ಜರುಗುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ನರೇಂದ್ರ ಮೋದಿ ಮತ್ತೊಂದು ಅವಧಿಗೆ ಭಾರತವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದರು.
ಶಾಸಕರು ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಲಕ್ಷ್ಮೀ ದೇವಿ ಟ್ರಸ್ಟ್ ಕಮಿಟಿ ಹಾಗೂ ವಿವಿಧ ಸಂಸ್ಥೆಗಳಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು.
ಸಿದ್ದಪ್ಪ ಹಮ್ಮನವರ, ಶಿವಪ್ಪ ಮರ್ದಿ, ಪರಸಪ್ಪ ಗದಾಡಿ, ಜಿ.ಎಲ್. ಕಂಕಣವಾಡಿ, ಗಂಗಾರಾಮ ಗುಡಗುಡಿ, ಸೋಮು ಹುಲಕುಂದ, ಕುಮಾರ ಮರ್ದಿ, ಡಾ. ವಸಂತ ನಾಯಿಕವಾಡಿ, ಭೀಮಶಿ ಗದಾಡಿ, ಆಶೀರ್ವಾದ ಹುಲಕುಂದ, ಯನನಪ್ಪ ಗದಾಡಿ, ಬಸು ಮರ್ದಿ, ಮುತ್ತೆಪ್ಪ ತುರನೂರ (ಪೂಜೇರಿ), ಸಿದ್ದಪ್ಪ ಮರ್ದಿ, ಬಾಪು ಹುಲಕುಂದ, ತಮ್ಮಣ್ಣ ಬಾಗೇವಾಡಿ, ಭರಮಪ್ಪ ಹರಿಜನ, ಸತ್ತೆಪ್ಪ ಮಲ್ಲಾಪುರ, ಗಂಗಾರಾಮ ಹಮ್ಮನವರ, ಭೀಮಶಿ ಅರಭಾವಿ, ರಾಮಪ್ಪ ಬಾಗೇವಾಡಿ ಇತರರಿದ್ದರು.