ಕ್ಷೇತ್ರದಲ್ಲಿ ಬಾಕಿ ಉಳಿದ ಕೆಲಸಗಳು ಶೀಘ್ರ ಪೂರ್ಣ

12yaragatti1-Web
ಮುಗಳಿಹಾಳ ಗ್ರಾಮದ ಕೃಷಿ ಪತ್ತಿನ ಸಂಘದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು ರೈತರಿಗೆ ಟ್ರ್ಯಾಕ್ಟರ್ ವಿತರಿಸಿದರು. ಅಜಿತಕುಮಾರ ದೇಸಾಯಿ, ಚನ್ನಪ್ಪ ದಳವಾಯಿ, ಎಸ್.ಎಸ್.ಗೋಣಿ, ನಾಗಪ್ಪ ಪುಂಜಿ, ಶಂಕರ ಇಟ್ನಾಳ, ಎನ್.ಕೆ.ಬಡಿಗೇರ, ಬಸಪ್ಪ ಪಾಟೀಲ, ಬಸಪ್ಪ ಬೆಲ್ಲದ ಇತರರಿದ್ದರು.
Published on

ಯರಗಟ್ಟಿ: ಕರೊನಾದಿಂದ ಸರ್ಕಾರಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾಗಿದ್ದು, ಅಭಿವೃದ್ಧಿ ಕಾಮಗಾರಿ ಕುಂಠಿತವಾಗಿವೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಸೇರಿ ಇತರ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಮುಂಬರುವ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಸಮೀಪದ ಮುಗಳಿಹಾಳ ಗ್ರಾಮದ ಕೃಷಿ ಪತ್ತಿನ ಸಂಘದಲ್ಲಿ ಶನಿವಾರ ರೈತರಿಗೆ ಟ್ರ್ಯಾಕ್ಟರ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲಾ ಸಹಕಾರಿ ಬ್ಯಾಂಕ್‌ನ ಮೂಲಕ ಕಡಿಮೆ ಬಡ್ಡಿ ಸಾಲ ಒದಗಿಸಿ ತಾಲೂಕಿನ ಹಲವು ರೈತರಿಗೆ ಟ್ರ್ಯಾಕ್ಟರ್‌ವಿತರಿಸಲಾಗಿದೆ. ರೈತರು ಸದುಪಯೋಗ ಪಡೆದುಕೊಂಡು ಕೃಷಿ ಜತೆಗೆ ಆರ್ಥಿಕವಾಗಿಯೂ ಸದೃಢವಾಗಬೇಕು ಎಂದರು.

ಮುಗಳಿಹಾಳದಲ್ಲಿ ಈ 3 ಸೇರಿ ಒಟ್ಟು 8 ಟ್ರ್ಯಾಕ್ಟರ್ ವಿತರಿಸಲಾಗಿದೆ. ಇಲ್ಲಿನ ರೈತ ಸಮುದಾಯಕ್ಕೆ 5 ಕೋಟಿ ರೂ. ಶೂನ್ಯ ಬಡ್ಡಿ ದರದ ಸಾಲ ನೀಡಲಾಗಿದೆ ಎಂದರು. ಜಿಪಂ ಸದಸ್ಯ ಅಜಿತಕುಮಾರ ದೇಸಾಯಿ, ಪಿಕೆಪಿಎಸ್ ಅಧ್ಯಕ್ಷ ಚನ್ನಪ್ಪ ದಳವಾಯಿ, ಬ್ಯಾಂಕ್ ನಿರೀಕ್ಷಕ ಎಸ್.ಎಸ್. ಗೋಣಿ, ನಾಗಪ್ಪ ಪುಂಜಿ, ಶಂಕರ ಇಟ್ನಾಳ, ಎನ್.ಕೆ.
ಬಡಿಗೇರ, ಬಸಪ್ಪ ಪಾಟೀಲ, ಕರೆಪ್ಪ ಕಲಗೋಡ, ಭೀಮಶೆಪ್ಪ ಕಲ್ಲಕುಟ್ರಿ, ಬಸಪ್ಪ ಬೆಲ್ಲದ, ಸಂಗಪ್ಪ ಬೆಲ್ಲದ, ಪಿಕೆಪಿಎಸ್ ನಿರ್ದೇಶಕರು, ಗ್ರಾಮಸ್ಥರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net