

ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗಂಭೀರವಾದ ಫಲಿತಾಂಶ ಬಂದಿದೆ. ಎನ್‌ಡಿಎ ಅಧಿಕಾರ ಹಿಡಿಯುವಷ್ಟು ಸ್ಥಾನ ಗಳಿಸಿದ್ದರೂ ನರೇಂದ್ರ ಮೋದಿ ಒಂದರ್ಥದಲ್ಲಿ ಸೋತಿದ್ದಾರೆ. ಇಂಡಿಯಾ ಒಕ್ಕೂಟ ವಾಸ್ತವವಾಗಿ ಗೆದ್ದಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾರ್ಮಿಕವಾಗಿ ನುಡಿದರು.
ಇದು ಜನರು ಮತ್ತು ಸರ್ವಾಧಿಕಾರಿ ನಡುವೆ ನಡೆದ ಚುನಾವಣೆಯಾಗಿತ್ತು. ಜನರು ಪ್ರಜಾಪ್ರಭುತ್ವ ಉಳಿಸಿಕೊಟ್ಟಿದ್ದಾರೆ. ಬಹುಕಾಲ ನಾವೇ ಅಧಿಕಾರದಲ್ಲಿರುತ್ತೇವೆ. 400ಕ್ಕೂ ಅಧಿಕ ಸ್ಥಾನ ಪಡೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದವರನ್ನು ಜನರು ತಿರಸ್ಕರಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.