ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಿಗೆ ಜಯ

8
ಅರಳಿಹಟ್ಟಿ ಸಹಕಾರಿ ಸಂಘಕ್ಕೆ ಆಯ್ಕೆಯಾದ ಸದಸ್ಯರು ವಿಜಯೋತ್ಸವ ಆಚರಿಸಿದರು. ತಾನಾಜಿ ಶಿಂಧೆ, ಸಂಜಯ್ ಬೇಡಗೆ, ಸಿದ್ದನಾಥ ಅವಳೇಕರ, ಸುರೇಶ ಅವಳೇಕರ ಇತರರಿದ್ದರು.
Published on

ಸಂಬರಗಿ: ಸಮೀಪದ ಅರಳಿಹಟ್ಟಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ ಮತ್ತು ಮುಖಂಡ ವಿನಾಯಕ ಬಾಗಡಿ ಅವರ ನೇತೃತ್ವದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಚುಕ್ಕಾಣಿ ಹಿಡಿದಿದ್ದಾರೆ.

ಸಂಘದ ಸದಸ್ಯ ತಾನಾಜಿ ಶಿಂಧೆ ಮಾತನಾಡಿ, ಶಾಸಕರಾದ ಲಕ್ಷ್ಮಣ ಸವದಿ ಹಾಗೂ ರಾಜು ಕಾಗೆ ಅವರು ಸಂಘವು ಕಷ್ಟದಲ್ಲಿದ್ದಾಗ ಬೆನ್ನಲುಬಾಗಿ ನಿಂತಿದ್ದಾರೆ. ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಕೆ.ಆರ್.ಪಾಟೀಲ ಮಾತನಾಡಿದರು. ತಾನಾಜಿ ಶಿಂಧೆ, ಸಂಜಯ್ ಬೇಡಗೆ, ಸಿದ್ಧನಾಥ ಅವಳೇಕರ, ಸುರೇಶ ಅವಳೇಕರ, ಮುಕ್ತಾಬಾಯಿ ಅವಳೇಕರ, ಪ್ರಿಯಂಕಾ ಮಾನೆ, ಮಹಾದೇವ ಕಾಂಬಳೆ, ರವೀಂದ್ರ ಸನದಿ, ಇಸಾಕ್ ಮುಲ್ಲಾ, ಕೇದಾರಿ ನಾಗರಾಳೆ, ಮಂಜುನಾಥ ಪಾಲೀಲ ಹಾಗೂ ಬಿಜೆಪಿ ಬೆಂಬಲಿತ ಧೋಂಡಿರಾಮ ಅವಳೇಕರ ಆಯ್ಕೆಯಾಗಿದ್ದಾರೆ. ಸದಸ್ಯರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಉಮಾಜಿ ಸನದಿ, ಹನಮಂತ ಸನದಿ, ಸದಾಶಿವ ಪಾಟೀಲ, ರಮೇಶ ಲಾಂಡಗೆ, ಅಪ್ಪು ನಾಗರಾಳೆ, ಮಹಾದೇವ ಬಿಸರಕರ, ಜಾನಿಂದ್ರ ಗಂಗಾಧರ, ರಾಮದಾಸ ಮಾನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net