ಭಕ್ತಿಯಲ್ಲಿದೆ ಭಗವಂತನ ಒಲುಮೆ

12MUGALIHAL1
Published on

ಮುಗಳಿಹಾಳ: ಭಗವಂತ ಒಲಿಯುವುದು ಕೇವಲ ಭಕ್ತಿಗೆ ಮಾತ್ರ. ಹಾಗಾಗಿ ದೇವರ ನಾಮಸ್ಮರಣೆಯಲ್ಲಿ ಯಾವತ್ತೂ ಕಲ್ಮಶ ಇರಬಾರದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ಮೆಳ್ಳಿಕೇರಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 7ನೇ ಶ್ರೀ ಬಸವಗೋಪಾಲ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಗವಂತನನ್ನು ಪ್ರೀತಿಸುವ ಮಾರ್ಗ ಭಕ್ತಿ. ಸತ್ಕಾರ್ಯ ಮಾಡುತ್ತ ಧರ್ಮ ಪಾಲನೆ ಮಾಡುತ್ತಿರಬೇಕು. ನಿಸ್ವಾರ್ಥ ಮನೋಭಾವದಿಂದ ಸಂಪತ್ತನ್ನು ಸಮಸ್ತ ಮಾನವಕುಲಕ್ಕೆ ವಿತರಿಸಬೇಕು. ಎಲ್ಲರೂ ಒಳ್ಳೆಯ ರೀತಿಯಾಗಿ ಜೀವನ ನಡೆಸಲು ಬಂಡಿಗಣಿ ಅಪ್ಪಾಜಿ ಹಿತೋಪದೇಶ ಸಹಕಾರಿಯಾಗಿವೆ ಎಂದರು.

ಸಾನ್ನಿಧ್ಯ ವಹಿಸಿದ್ದ ದಾಸೋಹ ರತ್ನ ಚಕ್ರವರ್ತಿ ಅನ್ನದಾನೇಶ್ವರ ಅಪ್ಪಾಜಿ ಆಶೀರ್ವಚನ ನೀಡಿ, ಮಾನವ ಜೀವನ ದೊಡ್ಡದು. ಅದನ್ನು ಸಾರ್ಥಕ ಮಾಡಿಕೊಂಡು ಮಾದರಿಯಾಗಿ ಬದುಕಬೇಕು. ಒಳ್ಳೆಯ ಕೆಲಸ ಕಾರ್ಯ ಮಾಡುವವರನ್ನು ಭಗವಂತ ಕಾಯುತ್ತಾನೆ ಎಂದರು.

ಮುಖಂಡರಾದ ಪ್ರಕಾಶ ವಾಲಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಲಕ್ಕಪ್ಪ ಪೂಜೇರ, ಬಸಪ್ಪ ಪಾರಿವಾಳ, ಕರೆಪ್ಪ ಬಾಚಗೌಡ್ರ, ಪ್ರವೀಣ ರಾಮಪ್ಪನವರ, ಶಿವು ರಾಠೋಡ, ಗೋಪಾಲ ದಳವಾಯಿ, ನಾಗರಾಜ ದೇಸಾಯಿ, ಗ್ರಾಪಂ ಸದಸ್ಯ ಶಿವಪ್ಪ ಇಟ್ನಾಳ, ಮಹಾದೇವ ದೇಸಾಯಿ, ಯಲ್ಲಪ್ಪ ಭಾವಿಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net