

ನಂದೇಶ್ವರ: ಕೆಲ ವರ್ಷಗಳ ಹಿಂದೆ ಅಥಣಿ ತಾಲೂಕಿನ ಘಟನಟ್ಟಿ ಕ್ರಾಸ್‌ನಿಂದ ಶ್ರೀಶೈಲವರೆಗೆ 5 ಬಾರಿ ದೀರ್ಘದಂಡ ನಮಸ್ಕಾರ ಹಾಕಿರುವ ತಾಯಿ ಸಂಗವ್ವ ಸದಾಶಿವ ಅವಟಿ ಅವರ ಭಕ್ತಿ ಚಿರಕಾಲ ಉಳಿಯುವಂತದ್ದು ಎಂದು ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಸಮೀಪದ ಘಟನಟ್ಟಿ ಕ್ರಾಸ್ ಹತ್ತಿರದ ಬುಧವಾರ ಹಮ್ಮಿಕೊಂಡಿದ್ದ ಶ್ರೀಮಲ್ಲಿಕಾರ್ಜುನ ದೇವರು ಹಾಗೂ ಬ್ರಮರಾಂಬಾ ದೇವಿಯ 14ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಕ್ತೆ ಸಂಗವ್ವ ಅವಟಿ ಅವರ ಭಕ್ತಿಗೆ ಒಲಿದು ಸಾಕ್ಷಾತ ಶ್ರೀಶೈಲ ಮಲ್ಲಿಕಾರ್ಜುನ ದೇವರು ಘಟನಟ್ಟಿ ಕ್ರಾಸ್ ಹತ್ತಿರ ಬಂದು ನೆಲೆಸಿದ್ದಾನೆ. ಇಲ್ಲಿಯ ದೇವಸ್ಥಾನ ಮುಂಬರುವ ದಿನಗಳಲ್ಲಿ 2ನೇ ಶ್ರೀಶೈಲವಾಗಲಿದೆ. ಪುಣ್ಯಕ್ಷೇತ್ರದಲ್ಲಿ ಮಾತ್ರ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುತ್ತದೆ. ಭಕ್ತಿಯಲ್ಲಿ ಅಪಾರವಾದ ಶಕ್ತಿ ಇದೆ. ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭಕ್ತಿಯಿಂದ ನಡೆದುಕೊಳ್ಳಬೇಕು ಎಂದರು.
ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಂಕಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಕೌಲಗುಡ್ಡದ ಅಮರೇಶ್ವರ ಮಹಾರಾಜರು, ಮುಖಂಡ ಬಾಬು ಗಲಗಲಿ, ಸಂಗವ್ವ ಅವಟಿ, ಮಲ್ಲಪ್ಪ ಹಂಚಿನಾಳ, ದುಂಡಪ್ಪ ಉಳ್ಳಾಗಡ್ಡಿ, ಹನುಮಂತ ಅವಟಿ, ವಜ್ರಕಾಂತ ಗಲಗಲಿ, ಕರೆಪ್ಪ ಪಟೇಕರ, ಅನಿಲ ಗಲಗಲಿ, ಸದಾಶಿವ ಜನವಾಡ, ಶ್ರೀಶೈಲ ಜಗದೇವ, ಶ್ರೀಶೈಲ ಜಕಪ್ಪನವರ, ಹನುಮಂತ ಕುಳಗೇರಿ, ಉಮೇಶ ನಾವಿ, ರಾಜು ಕುರೆನ್ನವರ, ವಿಶಾಲ ಮಾಂಗ, ಶ್ರೀಶೈಲ ಜಕ್ಕಪ್ಪನವರ, ಶಿವಗೌಡ ಪಾಟೀಲ, ಶ್ರೀಶೈಲ ಜಗದೇವ ಇತರರಿದ್ದರು.