ದೇವದುರ್ಗದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

dvd istalinga puje
ದೇವದುರ್ಗದ ಅಂಬಾಭವಾನಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರು.
Published on

ದೇವದುರ್ಗ: ಸೀಗೆ ಹುಣ್ಣಿಮೆ ನಿಮಿತ್ತ ಪಟ್ಟಣದ ಶ್ರೀ ಅಂಬಾಭವನಿ ದೇವಸ್ಥಾನದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ದಸರಾ ಉತ್ಸವ ಸಮಿತಿಯಿಂದ ಮಂಗಳವಾರ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು.

ಸುಲ್ತಾನಪುರ ಶ್ರೀ ಪಂಚಾಕ್ಷರಿ ಮಠದ ಪೀಠಾಧಿಪತಿ ಶಂಭು ಸೋಮನಾಥ ಶಿವಾಚಾರ್ಯರು ಸಾನ್ನಿಧ್ಯವಹಿಸಿ ಇಷ್ಟಲಿಂಗ ಪೂಜೆಯ ಮಹತ್ವ ಸಾರಿದರು. ಒಂದುಗಂಟೆ ಕಾಲ ಶ್ರೀಗಳು ಕೈಗೊಂಡ ಸಂಗೀತಯುಕ್ತ ಲಿಂಗಪೂಜೆ ಕಣ್ಮನ ಸೆಳೆಯಿತು. ಭಕ್ತರು ಸಾಮೂಹಿಕ ಇಷ್ಟ ಲಿಂಗಪೂಜೆ ಮಾಡಿ ಶ್ರದ್ಧಾಭಕ್ತಿ ಮೆರೆದರು. ನೂರಾರು ದಂಪತಿಗಳು, ಸಾವಿರಾರು ಮಹಿಳೆಯರು ಭಾಗವಹಿಸಿ ಇಷ್ಟಲಿಂಗ ಪೂಜೆ ಮಾಡಿದರು. ನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ದಸರಾ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹಂಚಿನಾಳ, ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಶೀಖರೇಶ ಪಾಟೀಲ್, ಮುಖಂಡರಾದ ಮಹಾದೇವ ಪಾಟೀಲ್ ಮೂಲಿಮನಿ, ಮಲ್ಲನಗೌಡ ಗೆಜ್ಜೆಬಾವಿ, ರವೀಂದ್ರ ದೇಸಾಯಿ, ರಾಮು ಅಳ್ಳುಂಡಿ, ಗೋಪಾಲರೆಡ್ಡಿ ಕೊಡೇರ್, ಬಸವರಾಜ ಉಗ್ಗಿ, ಬಸವರಾಜ ಮಡಿವಾಳ, ಶರಣಪ್ಪ ಪಡಿಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net