ದೇವದುರ್ಗದಲ್ಲಿ ಸರಣಿ ಕಳ್ಳನ ಬಂಧನ

16 DVD 02
ಓಂಕಾರ
Published on

ದೇವದುರ್ಗ: ಪಟ್ಟಣದಲ್ಲಿ ಸರಣಿ ಕಳ್ಳತನದಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಒಬ್ಬನನ್ನು ಬಂಧಿಸಿದ್ದಾರೆ.

ಓಂಕಾರ ತುಕರಾಮ್ ಕಾಂಬ್ಲೆ ಬಂಧಿತ ಆರೋಪಿ. ಬಂಧಿತನಿಂದ 12ಸಾವಿರ ರೂ. ನಗದು ವಶಕ್ಕೆ ಪಡೆಯಲಾಗಿದೆ. ಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪದ ಆನ್‌ಲೈನ್ ಸೆಂಟರ್ ಹಾಗೂ ಬಸ್‌ನಿಲ್ದಾಣ ಸಮೀಪದ ಪಾನ್ ಶಾಪ್‌ನಲ್ಲಿ ಕಳ್ಳತನ ನಡೆದಿತ್ತು.

ಪ್ರಕರಣ ಸಂಬಂಧ ಪಿಐ ಎಸ್.ಮಂಜುನಾಥ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡದಲ್ಲಿ ಶಿವಣ್ಣ, ರಿಯಾಜ್, ಹನುಮಂತು, ಮಹೇಶ, ಬೂದೆಪ್ಪ, ಸಿದ್ದಪ್ಪ, ಅಜೀಂಪಾಷಾ, ಗೋಪಾಲ್‌ಸಿಂಗ್ ಇದ್ದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಐ ಎಸ್.ಮಂಜುನಾಥ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net