ಡಿಸೆಂಬರ್‌ನಲ್ಲಿ ಎಂಪಿ ಟ್ರೋಫಿ

2
ರಾಯಬಾಗದಲ್ಲಿ ಶಾಸಕ ಡಿ.ಎಂ. ಐಹೊಳೆ ಅವರು ಎಂ.ಪಿ. ಟ್ರೋಫಿ ಕಬಡ್ಡಿ ಪಂದ್ಯಾವಳಿ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಎಲ್.ಬಿ.ಚೌಗುಲೆ, ಸದಾನಂದ ಹಳಿಂಗಳಿ ಇತರರಿದ್ದರು.
Published on

ರಾಯಬಾಗ: ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆ ಆವರಣದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಎಂ.ಪಿ.ಟ್ರೋಫಿ ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿ ಡಿ.2, 3ರಂದು ಜರುಗಲಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಬಾಗ ವಿಧಾನಸಭಾ ಕ್ಷೇತ್ರದಲ್ಲಿ ವಿಜೇತರಾದ ನಾಲ್ಕು ತಂಡಗಳು ಚಿಕ್ಕೋಡಿ ಜಿಲ್ಲಾಮಟ್ಟಕ್ಕೆ ಅರ್ಹತೆ ಪಡೆಯಲಿವೆ. ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಪ್ರೋತ್ಸಾಹಿಸಲು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯ 8 ವಿಧಾನಸಭೆಗಳಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದಾರೆ. ಕ್ರೀಡಾಪಟುಗಳು ಪ್ರತಿಭೆ ಪ್ರದರ್ಶಿಸಲು ಇದು ಸುವರ್ಣಾವಕಾಶ ಎಂದರು.

ನ್ಯಾಯವಾದಿ ಎಲ್.ಬಿ.ಚೌಗುಲೆ, ಸದಾನಂದ ಹಳಿಂಗಳಿ, ಬಸವರಾಜ ಡೊಣವಾಡೆ, ಅಮಿತ ಜಾಧವ, ಅರುಣ ಐಹೊಳೆ, ಸುರೇಶ ಮಾಳಿ, ಜಿಯಾವುಲ್ಲ ಮುಲ್ಲಾ, ರಂಜಾನ್ ಮಕಾಂದಾರ್, ಸಂಜು ಕುರಣೆ, ಅಪ್ಪಾಸಾಬ ಕೆಂಗಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net