ಕಂಟೇನರ್‌ನಲ್ಲಿ ರಾಜಸ್ಥಾನಕ್ಕೆ ಹೊರಟವರು ವಶಕ್ಕೆ

01
Published on

ಹಿರೇಬಾಗೇವಾಡಿ: ಬೆಂಗಳೂರಿನಿಂದ ಕಂಟೇನರ್‌ನಲ್ಲಿ ರಾಜಸ್ಥಾನಕ್ಕೆ ಅನಧಿಕೃತವಾಗಿ ಹೊರಟಿದ್ದ 50 ಜನರನ್ನು ಹಿರೇಬಾಗೇವಾಡಿ ಪೊಲೀಸರು ಇಲ್ಲಿನ ಟೋಲ್ ನಾಕಾದಲ್ಲಿ ಮಂಗಳವಾರ ವಶಕ್ಕೆ ಪಡೆದು, ಬೆಳಗಾವಿಗೆ ಕ್ವಾರಂಟೈನ್‌ಗೆ ಕಳುಹಿಸಿದ್ದಾರೆ.

ಬೆಂಗಳೂರಿನ ಮಾಗಡಿ ರಸ್ತೆಯಿಂದ ಕಂಟೇನರ್ ಹತ್ತಿದ್ದ ಕೂಲಿ ಕಾರ್ಮಿಕರು ಯಾವುದೇ ದಾಖಲೆಗಳಿಲ್ಲದೆ ರಾಜಸ್ಥಾನದ ಜೋಧಪುರ ಜಿಲ್ಲೆಯ ಬಾವಿ ಗ್ರಾಮಕ್ಕೆ ತೆರಳುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಚಾಲಕ ಮತ್ತು ಕ್ಲೀನರ್ ಸೇರಿ ಒಟ್ಟು 52 ಜನರನ್ನು ಬೆಳಗಾವಿಯಲ್ಲಿ ಜಿಲ್ಲಾಡಳಿತದಿಂದ ತೆರೆಯಲಾದ ರಿಸೆಪ್ಶನ್ ಸೆಂಟರ್ ಾರ್ ಔಟ್‌ಸೈಡ್ ಲೇಬರ್ಸ್/ ಮೈಗ್ರೇಟ್ಸ್ ಸೆಂಟರ್‌ಗೆ ಕಳುಹಿಸಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net