

ಬೆಳಗಾವಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಸ್ಪರ್ಧೆಯಲ್ಲಿ ಸೋಲು&ಗೆಲುವು ಮುಖ್ಯವಲ್ಲ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕ ವಿ.ಐ.ಪಾಟೀಲ ಹೇಳಿದರು.
ಬೆಲಹೊಂಗಲ ಪಟ್ಟಣದ ಕೆಎಲ್ಇ ಸಂಸ್ಥೆಯ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ತಾಲೂಕುಮಟ್ಟದ ಸಾಂಸತಿಕ ಚಟುವಟಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯತೆ ವಹಿಸಿದ್ದ ಕೆಎಲ್ಇ ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್ ತಟವಾಟಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಕಠಿಣ ಪರಿಶ್ರಮ ಪಡಬೇಕು ಎಂದರು. ಹಿರಿಯ ಉಪನ್ಯಾಸಕ ಬಿ.ಜಿ ಪುರಾಣಿಕಮಠ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಎಸ್.ಬಿ ತಟವಾಟಿ, ಸಾಂಸತಿಕ ವಿಭಾಗದ ಕಾರ್ಯದರ್ಶಿ ವಿ.ಬಿ ಬಡಿಗೇರ, ಸಿ.ಆರ್ ಸಣ್ಣಾಯ್ಕರ, ವಿದ್ಯಾ ಮುನವಳ್ಳಿ, ದೀಪಾ ಹೇಮಗಿರಿಮಠ ಇತರರಿದ್ದರು.