ಬಣ್ಣದಲ್ಲಿ ಮಿಂದೆದ್ದ ಯುವಕರು

14HALLUR1
Published on

ಹಳ್ಳೂರ: ಗ್ರಾಮ ಹಾಗೂ ಶಿವಾಪೂರ (ಹ), ಖಾನಟ್ಟಿ ಸೇರಿ ಸುತ್ತಲಿನ ವಿವಿಧ ಗ್ರಾಮಗಳಲ್ಲಿ ಹೋಳಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.

ಗುರುವಾರ ಬೆಳಗ್ಗೆ ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಪೂಜೆ, ನೈವೇದ್ಯ ಸಲ್ಲಿಸಲಾಯಿತು. ಸಂಜೆ 7 ಗಂಟೆಗೆ ಗ್ರಾಮದ ಹಳಬರು ಕಾಮನ ಪ್ರದಣೆಗೆ ಪೂಜೆ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆ ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ ತೆರಳಿದ ಪಾದಯಾತ್ರಿಕರಿಗೆ ಬೀಳ್ಕೊಟ್ಟು ಕಾಮನ ದಹನ ನೆರವೇರಿಸಲಾಯಿತು.

ಚಿಕ್ಕಮಕ್ಕಳು, ಯುವಕರು ಹಲಗೆ ಹೊಡೆಯುತ್ತ ಸಂಗೀತಕ್ಕೆ ಹೆಜ್ಜೆ ಹಾಕುವ ಮೂಲಕ ಪರಸ್ಪರ ಬಣ್ಣ ಹಚ್ಚಿ ಅದ್ದೂರಿಯಾಗಿ ಹೋಳಿ ಆಚರಿಸಿದರು. ಹೋಳಿಯ ಲಾವಣಿ ಪದ ಹಾಡುತ್ತ ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net