

ಮುದಗಲ್: ಪಟ್ಟಣದ ಮೇಗಳಪೇಟೆ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸೋಮವಾರ ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಓಕಳಿಯಾಡಿ ಸಂಭ್ರಮಿಸಿದರು.
ಯುಗಾದಿ ಕರಿ ನಿಮಿತ್ತ ಗ್ರಾಮೀಣ ಭಾಗಗಳಲ್ಲಿ ಎಲ್ಲೆಡೆ ಪರಸ್ಪರ ಬಣ್ಣ ಎರಚಿ ಯುವಕರು ಹಾಗೂ ಚಿಕ್ಕಮಕ್ಕಳು ಮಹಿಳೆಯರು ಬಣ್ಣದಲ್ಲಿ ಮಿಂದೆದ್ದರು. ಮೇಗಳಪೆಟೆ ಮತ್ತು ಮಟ್ಟೂರಿನಲ್ಲಿ ಮಡಕೆ ಒಡೆಯುವ ಸ್ಪರ್ಧೆ ಹಾಗೂ ನಾಗಲಾಪೂರ ಮತ್ತು ನಾಗರಹಾಳ ಗ್ರಾಮಗಳಲ್ಲಿಯೂ ಕೂಡ ಯುವಕರು ಓಕುಳಿ ನಿಮಿತ್ತ ಬಗೆ ಬಗೆಯ ಕ್ರೀಡೆಯಲ್ಲಿ ಭಾಗಿಯಾಗಿ ಹಬ್ಬವನ್ನು ಆಚರಿಸಿದರು.