ಮಕ್ಕಳಲ್ಲಿ ದೃಷ್ಟಿದೋಷ ಹೆಚ್ಚಳ

13Kulagod1
ಕುಲಗೋಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿದರು. ತಮ್ಮಣ್ಣ ದೇವರ, ಸತೀಶ ವಂಟಗೋಡಿ, ರಾಮಚಂದ್ರ ನಾಯಿಕ, ಪ್ರಶಾಂತ ವಂಟಗೋಡಿ, ಸೋಮಲಿಂಗ ಮಿಕಲಿ, ವೆಂಕಣ್ಣ ಚನ್ನಾಳ ಇತರರಿದ್ದರು.
Published on

ಕುಲಗೋಡ: ಮೊದಲು ಮಕ್ಕಳಲ್ಲಿ ಕನ್ನಡಕ ಬಳಕೆ ವಿರಳವಾಗಿತ್ತು. ಆದರೆ, ಈಚಿನ ದಿನಗಳಲ್ಲಿ ದೃಷ್ಟಿದೋಷ ಹೆಚ್ಚುತ್ತಿರುವುದು ಕಳವಳಕಾರಿ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ ಹೇಳಿದರು.

ತಾಲೂಕಿನ ಕುಲಗೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಪಂ, ಸಾಯಿರತ್ನ ೌಂಡೇಷನ್ ಹಾಗೂ ನದಾ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಉಚಿತ ನೇತ್ರ ಶಸಚಿಕಿತ್ಸೆ ಜತೆಗೆ ಆಸ್ಪತ್ರೆಗೆ ತೆರಳಲು ಅಗತ್ಯ ವ್ಯವಸ್ಥೆ ಒದಗಿಸಿರುವುದು ಉತ್ತಮ ಎಂದರು.

ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಪಿಡಿಒ ಸದಾಶಿವ ದೇವರ ಮಾತನಾಡಿದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.
ಗ್ರಾಪಂ ಅಧ್ಯಕ್ಷ ತಮ್ಮಣ್ಣ ದೇವರ, ಸತೀಶ ವಂಟಗೋಡಿ, ರಾಮಚಂದ್ರ ನಾಯಿಕ, ಪ್ರಶಾಂತ ವಂಟಗೋಡಿ, ಸೋಮಲಿಂಗ ಮಿಕಲಿ, ವೆಂಕಣ್ಣ ಚನ್ನಾಳ, ಸಾಯಿರತ್ನ ೌಂಡೇಷನ್ ಅಧ್ಯಕ್ಷ ಶಂಕರ ಹಾದಿಮನಿ, ಹುಸೇನ ನದಾ, ರೀದ ಮಕಾನದಾರ ಹಾಗೂ ನದಾ ಕಣ್ಣಿನ ಆಸ್ಪತ್ರೆ ವೈದ್ಯರು ಹಾಗೂ ಗ್ರಾಪಂ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net