

ಅಥಣಿ: ಮಕ್ಕಳಿಗೆ ಶಿಕ್ಷಣದೊಟ್ಟಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳ ಪ್ರತಿಭೆ ಗುರುತಿಸಿ ಸಾಧನೆಗೆ ಪ್ರೋತ್ಸಾಹಿಸಬೇಕು ಎಂದು ಆದರ್ಶ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾವಸಾಹೇಬ ಐಹೊಳೆ ಹೇಳಿದರು.
ಪಟ್ಟಣದ ವೈಭವ ನಗರದಲ್ಲಿ ಈಚೆಗೆ ಏರ್ಪಡಿಸಿದ್ದ ಆದರ್ಶ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ದೇಶಭಕ್ತಿ, ಇತಿಹಾಸ, ಕಲೆ, ಸಾಹಿತ್ಯದ ಅರಿವು ಮೂಡಿಸಬೇಕು ಎಂದರು.
ದಿಗ್ವಿಜಯ ಪವಾರದೇಸಾಯಿ ಮಾತನಾಡಿ, ಮಕ್ಕಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಶೇಖರ ಸೌದಾಗರ, ಸಿದ್ಧಾರೂಢ ಹಿರೇಮಠ, ಬಂಗಾರೆವ್ವ ಐಹೊಳೆ, ವಿದ್ಯಾ ಐಹೊಳೆ, ಸತೀಶ ಕುಲಕರ್ಣಿ, ರಮೇಶ ಪವಾರ, ಮಹಾದೇವ ಹಲ್ಯಾಳ, ಸಿದರಾಯ ಸಣಕ್ಕಿ, ಎನ್.ಕೆ.ಪಾಟೀಲ, ಸಿದ್ದು ಪಾಟೀಲ, ಶಂಕರ ಹಳ್ಳದಮಳ, ಮಹಾಂತೇಶ ಸಾಬಣ್ಣವರ, ವೈಭವ ಐಹೊಳೆ ಇತರರು ಇದ್ದರು.