

ಇಟಗಿ: ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಗ್ರಾಮದ ಗಣೇಶ ಕಲ್ಯಾಣ ಮಂಟಪದ ಸಿದ್ದೇಶ್ವರ ಸ್ವಾಮೀಜಿ ಸಭಾಂಗಣದಲ್ಲಿ ಶನಿವಾರ ಇಟಗಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಸೇವಾ ನಿವೃತ್ತ ಶಿಕ್ಷಕಿ ಜಯಶ್ರೀ ಹಿರೇಮಠ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದರು.
ಚಿಕ್ಕಮುನವಳ್ಳಿ ಆರೂಢ ಮಠದ ಶಿವಪುತ್ರ ಸ್ವಾಮೀಜಿ ಹಾಗೂ ಶಿಕ್ಷಕರಾದ ನಾಗಪ್ಪ ಬೆನಚಿನಮರಡಿ, ಮಂಜು ಪೂಜಾರ ಮಾತನಾಡಿದರು. ಚನ್ನಬಸವದೇವರು, ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಜಡೇಸಿದ್ದೇಶ್ವರ ಸ್ವಾಮೀಜಿ, ಎಸ್‌ಡಿಎಂಸಿ ಅಧ್ಯಕ್ಷೆ ಮೇಘಾ ಪುಂಡಿ, ಗ್ರಾಪಂ ಅಧ್ಯಕ್ಷ ರುದ್ರಪ್ಪ ತುರಮರಿ, ಗ್ರಾಪಂ ಮಾಜಿ ಅಧ್ಯಕ್ಷ ಅಪ್ಪಣ್ಣ ದೊಡಮನಿ, ಡಾ.ಮಹಾಂತೇಶ ಹಿರೇಮಠ, ಜನತಾ ಶಿಕ್ಷಣ ಪ್ರಸಾರ ಸಮಿತಿ ಚೇರ್ಮನ್ ವಿಜಯಕುಮಾರ ಸಾಣಿಕೊಪ್ಪ, ಕಾರ್ಯದರ್ಶಿ ಶ್ರೀಶೈಲ ತುರಮರಿ, ಜಿಪಂ ಮಾಜಿ ಸದಸ್ಯ ಶ್ರೀಕಾಂತ ಹಿರೇಮಠ, ಜಗದೀಶಗೌಡ ಪಾಟೀಲ, ವಿ.ವಿ. ಬಡಿಗೇರ, ತಾಪಂ ಮಾಜಿ ಸದಸ್ಯರಾದ ಶ್ರೀಕಾಂತ ಇಟಗಿ, ಬಸವರಾಜ ಸಾಣಿಕೊಪ್ಪ, ಜಂಬು ಠಕಾಯಿ, ಎಸ್‌ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯರು ಮತ್ತು ಶಿಕ್ಷಕರು ಇದ್ದರು.
ಇಟಗಿ ಸರ್ಕಾರಿ ಶಾಲೆ ಸೇವಾ ನಿವೃತ್ತ ಶಿಕ್ಷಕಿ ಜಯಶ್ರೀ ಹಿರೇಮಠ ದಂಪತಿಯನ್ನು ಸನ್ಮಾನಿಸಲಾಯಿತು. ಶಾಸಕ ವಿಠ್ಠಲ ಹಲಗೇಕರ, ಶಿವಪುತ್ರ ಸ್ವಾಮೀಜಿ, ಚನ್ನಬಸವದೇವರು, ಮೇಘಾ ಪುಂಡಿ ಇತರರಿದ್ದರು.