ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ - ಎಂ.ಜಿ. ಹಿರೇಮಠ

DC New
Published on

ಬೆಳಗಾವಿ: ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ, ಕನಸುಗಳನ್ನು ಬಿತ್ತುವುದು ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ವಿಚಾರ ತುಂಬದೆ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸಲಹೆ ನೀಡಿದರು.

ದಿ ಬೆಳಗಾವಿ ರೂರಲ್ ಇಂಗ್ಲಿಷ್ ಟೀಚರ್ಸ್ ೆರಂ ವತಿಯಿಂದ ನಗರದ ಮಹಿಳಾ ವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಂ.ಐ.ಪೂಜಾರ ಬರೆದ ‘ದಿ ಟ್ರೇಜರ್ ಲ್ಯಾಂಡ್’ ಎಂಬ ಇಂಗ್ಲಿಷ್ ವ್ಯಾಕರಣ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಮಕ್ಕಳಿಗೆ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಕರು ಸಕಾರಾತ್ಮಕ ಪ್ರೇರಣೆ ನೀಡುತ್ತಿರಬೇಕು.

ವ್ಯಂಗ್ಯ ಮಿಶ್ರಿತ ಮಾತುಗಳನ್ನಾಡದೆ ಮಕ್ಕಳಲ್ಲಿ ಧನಾತ್ಮಕ ಆಸಕ್ತಿ ಹುಟ್ಟುಹಾಕಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಗಳ ಜ್ಞಾನ ಅತ್ಯಗತ್ಯ. ಈ ನಿಟ್ಟಿನಲ್ಲಿ ಪಾಠ ಓದದೇ ಇದ್ದರೂ ವ್ಯಾಕರಣ ಓದಿಯಾದರೂ ಉತ್ತೀರ್ಣರಾಗುವಂತಾಗಲು ಪೂಜಾರ ಅವರು ಪುಸ್ತಕ ಬರೆದಿದ್ದಾರೆ ಎಂದು ಜಿಲ್ಲಾಧಿಕಾರಿ ಹಿರೇಮಠ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾವರ್ಧಕ ಸಂಘದ ಚೇರ್ಮನ್ ಬಿ.ಜಿ.ವಾಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುರೇಶ ಇಟಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ.ಜುಟ್ಟಣ್ಣವರ ಮತ್ತು ವೈ.ಜೆ.ಭಜಂತ್ರಿ, ವಿಷಯ ಪರಿವೀಕ್ಷಕ ಎಂ.ಎನ್. ಪಾಟೀಲ, ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಸ್.ಎಸ್.ಮಠದ, ಜನರಲ್ ಸೆಕ್ರೆಟರಿ ರಾಮು ಗುಗವಾಡ, ಈಶ್ವರ ಹೋಟಿ ಸೇರಿ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲೆಯ ಇಂಗ್ಲಿಷ್ ವಿಷಯ ಪರಿವೀಕ್ಷಕರು ಇತರರು ಪಾಲ್ಗೊಂಡಿದ್ದರು. ಎಂ.ಐ.ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯಾ ಹಿರೇಮಠ ಪ್ರಾರ್ಥಿಸಿದರು. ಲಲಿತಾ ಮಹಾಜನಶೆಟ್ಟಿ ವಂದಿಸಿದರು. ಐ.ಜಿ. ಸುಬ್ಬಾಪುರಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net