ಚಿಕ್ಕಾಂಶಿ ಹೊಸೂರಲ್ಲಿ ಮೂರು ಭತ್ತದ ಬಣವೆ ಭಸ್ಮ

Crop Fire In Hanagal
Published on

ಹಾನಗಲ್ಲ: ಬೆಂಕಿ ತಗುಲಿ ಮೂರು ಭತ್ತದ ಬಣವೆಗಳು ಆಹುತಿಯಾದ ಘಟನೆ ತಾಲೂಕಿನ ಚಿಕ್ಕಾಂಶಿಹೊಸೂರ ಗ್ರಾಮದಲ್ಲಿ ನಡೆದಿದೆ.

ನಾಸಿರ್​ಸಾಬ ಮುಕ್ತುಮ್ಾಬ ಬೇಪಾರಿ ಎಂಬುವವರಿಗೆ ಸೇರಿದ 3 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಭತ್ತವನ್ನು ಕಟಾವು ಮಾಡಿ ಒಕ್ಕಲು ಮಾಡುವ ಉದ್ದೇಶದಿಂದ ಮೂರು ಕಡೆ ಬಣವೆ ಒಟ್ಟಲಾಗಿತ್ತು. ಮಂಗಳವಾರ ರಾತ್ರಿ ಬಣವೆಗಳಿಗೆ ಬೆಂಕಿ ಹತ್ತಿದ್ದರಿಂದ ಸುಟ್ಟು ಬೂದಿಯಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಶ್ರಮಿಸಿದರೂ, ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದ್ದರಿಂದ ಹತೋಟಿಗೆ ಬರದೇ ಬಣವೆಗಳು ಸಂಪೂರ್ಣ ಸುಟ್ಟಿವೆ. ಘಟನಾ ಸ್ಥಳಕ್ಕೆ ಗ್ರಾಮ ಆಡಳಿತ ಅಧಿಕಾರಿ ಮಾರುತಿ ಹೊಣಕುಪ್ಪಿ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net